ಗ್ರಾಹಕ ಸಂವಾದ ಸಭೆ ಎಂದರೇನು? | BESCOM

BESCOM : Bangalore Electricity Supply Company Limited

ಎಸ್ಎಂಎಸ್ : 58888
ಸಹಾಯವಾಣಿ : 1912
9449844640

ಗ್ರಾಹಕ ಸಂವಾದ ಸಭೆ ಎಂದರೇನು?

  • ಗ್ರಾಹಕರ ತೃಪ್ತಿಕರವಾದ ಸೇವೆಗಾಗಿ ಮತ್ತು ದೂರುಗಳನ್ನು ತುರ್ತಾಗಿ ಬಗೆಹರಿಸುವುದಕ್ಕಾಗಿ, ಗ್ರಾಹಕ ಒಡನಾಟ ಸಭೆಗಳನ್ನು ತಿಂಗಳಿಗೊಮ್ಮೆ ಪ್ರತಿ ಉಪವಿಭಾಗದಲ್ಲಿ ನಡೆಸಲಾಗುತ್ತದೆ.
  • ಸಭೆ ನಡೆಯುವ ಸ್ಥಳ, ತಾರೀಕು, ದಿನ ಮತ್ತು ಸಮಯ – ಇವುಗಳನ್ನು ಮುಂಚಿತವಾಗಿ ಉಪವಿಭಾಗ ಕಚೇರಿಯ ಮೂಲಕ ಪತ್ರಿಕೆಗಳಲ್ಲಿ, ಕರಪತ್ರಗಳಲ್ಲಿ, ಸೂಚನಾ ಫಲಕ ಮತ್ತು ಮಾಧ್ಯಮಗಳಲ್ಲಿ ಪ್ರಕಟಿಸಲಾಗುತ್ತದೆ.
  • ಸಭೆಯ ವೇಳಾಪಟ್ಟಿಯನ್ನು ಬೆ ವಿ ಕಂನ ವೆಬ್ ಸೈಟ್ ನಲ್ಲಿ ಕಾಣಬಹುದು.
  • ಗ್ರಾಹಕ ಸಂವಹವ ಸಭೆಗಳಲ್ಲಿ ಗ್ರಾಹಕರು ಸಹಭಾಗಿಗಳು. ಇಲ್ಲಿ ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಪ್ರಸ್ತಾಪಿಸಬಹುದು. ಇವುಗಳ ಕಾರ್ಯಕಲಾಪಗಳನ್ನು youtube ಮೂಲಕ ದಾಖಲಿಸಲಾಗುತ್ತದೆ.
  • ಗ್ರಾಹಕ ಸಂವಹನ ಸಭೆಯಲ್ಲಿ, ಗ್ರಾಹಕರು ದೂರು ದಾಖಲಿಸಿರುವುದರಿಂದ, ಆ ದೂರು ಉಪವಿಭಾಗದ ಮಟ್ಟದಲ್ಲೇ ನಿವಾರಿಸಲಾಗುತ್ತದೆ. ದೂರುಗಳನ್ನು ನಿಯಮಿತ ಸಮಯದಲ್ಲಿ ನಿವಾರಿಸದಿದ್ದಲ್ಲಿ, ಅದನ್ನು ಮೇಲಿನ ಮಟ್ಟದ ಅಧಿಕಾರಿಗಳಿಗೆ ವರ್ಗಾಯಿಸಲಾಗುತ್ತದೆ.
  • ಗ್ರಾಹಕರಿಗೆ ಸಮಾಧಾನವಾಗದಿದ್ದ ಪಕ್ಷದಲ್ಲಿ ‘ಗ್ರಾಹಕ ಕುಂದುಕೊರತೆ ನಿವಾರಣಾ ವೇದಿಕೆ’ (CGRF) ಗೆ ಮನವಿ ಸಲ್ಲಿಸಬಹುದು.