ವ್ಯವಸ್ಥಾಪಕ ನಿರ್ದೇಶಕರವರ ವೇಳಾಪಟ್ಟಿ ಬಗ್ಗೆ

ಈ ಭಾಗವು ಬೆ ವಿ ಕಂನ ಗೌರವಾನ್ವಿತ ವ್ಯವಸ್ಥಾಪಕ ನಿರ್ದೇಶಕರ ವೇಳಾಪಟ್ಟಿ ವಿವರಗಳನ್ನು ನೀಡುತ್ತದೆ. ತೋರಿಸಲಾದ ವೇಳಾಪಟ್ಟಿ ವಿವರಗಳನ್ನು ಸಾರ್ವಜನಿಕರ ಮಾಹಿತಿಗಾಗಿ ಮಾತ್ರ ನೀಡಲಾಗಿದೆ. ಇದು ಕಾನೂನುಬದ್ಧವಾಗಿ ಬಂಧಕವಲ್ಲ. ಪ್ರಕಟವಾಗಿರುವ ವೇಳಾಪಟ್ಟಿ ವಿವರಗಳು ತಾತ್ಕಾಲಿಕ ಹಾಗೂ ಕೆಲವು ತುರ್ತು ಸಂದರ್ಭಗಳಲ್ಲಿ ಬದಲಾಗುವ ಸಾಧ್ಯತೆಯಿದೆ. ಸಾರ್ವಜನಿಕರು ವೇಳಾಪಟ್ಟಿಯಲ್ಲಿ ಲಭ್ಯವಿರುವ ಕೆಲಸದ ದಿನಗಳಲ್ಲಿ ( ಬುಧವಾರ ಹಾಗು ಗುರುವಾರ ಗಳನ್ನು ಹೊರತುಪಡಿಸಿ) 3.30 ರಿಂದ 5.30 ಗಂಟೆ ನಡುವೆ ವ್ಯವಸ್ಥಾಪಕ ನಿರ್ದೇಶಕರ ಜೊತೆ ಭೇಟಿಗೆ ಮನವಿ ಸಲ್ಲಿಸಬಹುದು. ಮಾನ್ಯ ವ್ಯವಸ್ಥಾಪಕ ನಿರ್ದೇಶಕರು ಲಭ್ಯವಿರದ ಸಂಧರ್ಭದಲ್ಲಿ ಸಾರ್ವಜನಿಕರು ಸಂಭಂದಿತ ಇಲಾಖೆಯ ಮುಖ್ಯ ಪ್ರಧಾನ ವ್ಯವಸ್ಥಾಪಕರು / ಪ್ರಧಾನ ವ್ಯವಸ್ಥಾಪಕರು ಇವರನ್ನು ಸಂಪರ್ಕಿಸಬಹುದು. ವ್ಯವಸ್ಥಾಪಕ ನಿರ್ದೇಶಕರ ಜೊತೆ ಭೇಟಿಗಾಗಿ ವ್ಯವಸ್ಥಾಪಕ ನಿರ್ದೇಶಕರ ಕಛೇರಿಯ ಅಧಿಕಾರಿಗಳನ್ನು ಸಂಪರ್ಕಿಸಿ.