ಬೇಡಿಕೆಗೆ ತಕ್ಕಂತೆ ನಿರ್ವಹಣೆ ಎಂದರೇನು ?

ಬೇಡಿಕೆಗೆ ತಕ್ಕಂತೆ ನಿರ್ವಹಣೆ ಎಂದರೇನು?

ಬೇಡಿಕೆಗೆ ತಕ್ಕಂತೆ ನಿರ್ವಹಣೆಯು ಒಂದು ಯಾಂತ್ರಿಕ ಸಾಧನವಾಗಿದ್ದು, ಇದು ಗ್ರಾಹಕರ ಸಾಮರ್ಥ್ಯವನ್ನು ಅರಿತುಕೊಂಡು ಅದನ್ನು ನಿರ್ವಹಿಸಿ, ವಿದ್ಯುತ್ ಬಳಕೆಯನ್ನು ಕಡಿಮೆಗೊಳಿಸುವ ಸಂಕಲ್ಪವಾಗಿದೆ.

ಸಂಸ್ಥೆಯ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹಾಗೂ ವಿತರಣ ಸಾಮರ್ಥ್ಯಕ್ಕೆ ಅನುಗುಣವಾಗಿ, ಗ್ರಾಹಕರ ವಿದ್ಯುತ್ ಬಳಕೆಯ ವಿಧಾನವನ್ನು ಉತ್ಕೃಷ್ಟಮಟ್ಟದಲ್ಲಿ ಹೊಂದಾಣಿಕೆ ಮಾಡುವುದು.

ಬೇಡಿಕೆಗೆ ತಕ್ಕಂತೆ ನಿರ್ವಹಣೆಯ ಕಾರ್ಯಕ್ರಮವು, ಯೋಜಿಸುವುದು, ಅನುಷ್ಠಾನಗೊಳಿಸುವುದು, ಹಾಗೂ ಗ್ರಾಹಕರು ತಮ್ಮ ವಿದ್ಯುತ್ ಬಳಕೆಯ ವಿಧಾನವನ್ನು ಮಾರ್ಪಾಡುಗೊಳಿಸಿಕೊಳ್ಳುವಲ್ಲಿ ಅವರನ್ನು ಉತ್ತೇಜಿಸುವ ಸಲುವಾಗಿ ರೂಪಿಸಿರುವ ವಿದ್ಯುತ್ ಸಂಸ್ಥೆಗಳ ಚಟುವಟಿಕೆಗಳನ್ನು ಉಸ್ತುವಾರಿಗೆ ಒಳಪಡಿಸುವ ಕಾರ್ಯವನ್ನು ಒಳಗೊಂಡಿದೆ.

ಬೇಡಿಕೆಗೆ ತಕ್ಕಂತೆ ನಿರ್ವಹಣೆಯ ಕಾರ್ಯಕ್ರಮವು, ಉತ್ಕೃಷ್ಟ ಸಾಮರ್ಥ್ಯದ ಸಲಕರಣೆಗಳನ್ನು ಉಪಯೋಗಿಸುವುದು ಹಾಗೂ ಉತ್ತಮ ಕಾರ್ಯಾಚರಣೆ ಮೂಲಕ ವಿದ್ಯುಚ್ಛಕ್ತಿಯನ್ನು ಸಮರ್ಥ ರೀತಿಯಲ್ಲಿ ಬಳಸಿಕೊಳ್ಳುವ ವಿಧಾನವನ್ನು ಅವಲಂಬಿಸಿದೆ.

ಬೇಡಿಕೆಗೆ ತಕ್ಕಂತೆ ನಿರ್ವಹಣೆಯು, ವಿದ್ಯುತ್ ಬೇಡಿಕೆಯ ಬಗ್ಗೆ ಅರಿತುಕೊಂಡು ಅದರ ಪ್ರಮಾಣವನ್ನು ಇಳಿತಗೊಳಿಸುವುದು, ನಿಯಂತ್ರಿಸುವುದಕ್ಕೆ ಸಂಬಂಧಿಸಿದ ಕಾರ್ಯನೀತಿ ಹಾಗೂ ಕ್ರಮಗಳ ಅನುಷ್ಠಾನವಾಗಿದೆ. ಈ ಕಾರ್ಯಕ್ರಮವು ಸಮಾನ ರೀತಿಯ ಸೇವೆ ಹಾಗೂ ಅನುಕೂಲತೆಯ ಮೂಲಕ ಅಂತಿಮ ವಿದ್ಯುತ್ ಬಳಕೆ ವ್ಯವಸ್ಥೆಯ ಸುಧಾರಣೆ, ಬಳಕೆಯ ಪ್ರಮಾಣವನ್ನು ಕಡಿಮೆಗೊಳಿಸುವುದರತ್ತ ಗುರಿ ಹೊಂದಿದೆ.