ಸಾರ್ವಜನಿಕ ಪ್ರಕಟಣೆಗಳು

ಸಾರ್ವಜನಿಕ ಪ್ರಕಟಣೆ:

ಸಾರ್ವಜನಿಕವಾಗಿ ಪ್ರಕಟಣೆಯು ಒಂದು ವಿಷಯವನ್ನು ಬಹಿರಂಗಗೊಳಿಸುವ ಸಂದರ್ಭವಾಗಿದ್ದು, ವಾಸ್ತವಿಕವಾಗಿ ಅಂತಹ ವಿಷಯವು ಸಾರ್ವಜನಿಕ ನಾಗರಿಕರಿಗೆ ಈ ಮುಂಚೆ ತಿಳಿಯದ್ದಾಗಿದ್ದು, ಉದ್ದೇಶಪೂರಿತ ಅಥವಾ ಜನಸಾಮಾನ್ಯರಿಗೆ ತಿಳಿಸುವುದಕ್ಕಾಗಿರುತ್ತದೆ. ಈ ರೀತಿಯ ಬಹಿರಂಗಗೊಳಿಸುವಿಕೆಯು, ವ್ಯವಹರಣೆಯ ಕಾರ್ಯಾಚರಣೆ, ಸಾರ್ವಜನಿಕ ಸೇವೆ ಹಾಗೂ ವಿಶ್ವ ಹೂಡಿಕೆಯ ಸಂಬಂಧವಾಗಿ ಸರ್ವ ಸಾಧಾರಣವಾಗಿರುತ್ತದೆ. ಮುದ್ರಣ ಮಾಧ್ಯಮ, ಪತ್ರಿಕಾ ಗೋಷ್ಟಿ, ದೂರದರ್ಶನ ಅಥವಾ ಅಂತರ್ಜಾಲದಂತಹ ವಿದ್ಯುನ್ಮಾನ ಮಾಧ್ಯಮ ಇವುಗಳನ್ನೊಳಗೊಂಡಂತೆ ಸಾರ್ವಜನಿಕ ಪ್ರಕಟಣೆಯ ಕಾರ್ಯನಿರ್ವಹಣೆಯು ವಿವಿಧ ರೀತಿಯದ್ದಾಗಿದೆ.
ಅನೇಕ ದೇಶಗಳಲ್ಲಿ, ಸಾರ್ವಜನಿಕ ಪ್ರಕಟಣೆಗೆ ಸಂಬಂಧಿಸಿದಂತೆ, ನಿರ್ದಿಷ್ಟ ಕಾನೂನು ಜಾರಿಯಲ್ಲಿದೆ. ಈ ಬಹಿರಂಗಗೊಳಿಸುವಿಕೆಯ ಸಂಬಂಧವಾದ ಕಾನೂನುಗಳು ಸಾರ್ವಜನಿಕ ನಾಗರಿಕರಿಗೆ ಯಾವ ಮಾಹಿತಿಯನ್ನು ಬಹಿರಂಗಗೊಳಿಸಬಹುದು ಅಥವಾ ಬಹಿರಂಗಗೊಳಿಸಬಾರದು ಎಂಬುದನ್ನೂ ಸಹ ನಿರ್ದಿಷ್ಟಪಡಿಸುತ್ತವೆ.
ಯಾವುದೇ ಒಂದು ಸಂಸ್ಥೆಯ ಆಡಳಿತ ವಿಭಾಗ, ಆಡಳಿತ ರಚನೆ, ಆರ್ಥಿಕತೆ ಹಾಗೂ ಕಾರ್ಯಾಚರಣೆಯನ್ನು ಸಾರ್ವಜನಿಕವಾಗಿ ಪ್ರಕಟಗೊಳಿಸಿ ಆಡಳಿತ ನಿಯಂತ್ರಣ ವ್ಯವಸ್ಥೆಯಲ್ಲಿ ಪಾರದರ್ಶಕತೆ ಹಾಗೂ ಹೊಣೆಗಾರಿಕೆಯನ್ನು ತರುವುದು ಈ ಸಾರ್ವಜನಿಕ ಪ್ರಕಟಣೆಯನ್ನು ಬಹಿರಂಗಗೊಳಿಸುವ ಮೂಲ ಉದ್ದೇಶವಾಗಿದೆ.

ಸಾರ್ವಜನಿಕ ಪ್ರಕಟಣೆಯ ಮೂಲ ಉದ್ದೇಶ ಹೀಗಿವೆ:

  • ನಾಗರೀಕರು ಹಾಗೂ ಆಸಕ್ತ ಭಾಗೀದಾರರಿಗೆ ಒದಗಿಸುವ ವಿವಿಧ ಸೇವೆಗೆ ಸಂಬಂಧಪಟ್ಟ ಆರ್ಥಿಕ ಹಾಗೂ ಕಾರ್ಯಾಚರಣೆ ಮಾಹಿತಿಯನ್ನು ಒದಗಿಸುವುದು.
  • ಸಾರ್ವಜನಿಕ ಸೇವೆ ಸಲ್ಲಿಸುವಲ್ಲಿ ಕಾರ್ಯದಕ್ಷತೆ ಹಾಗೂ ನಿರಂತರತೆಯನ್ನು ಉತ್ತೇಜಿಸಲು.
  • ಒಂದು ರಚನಾತ್ಮಕ, ನಿಯತ ಹಾಗೂ ನಿಗದಿಪಡಿಸಿದ ಮಾರ್ಗದಲ್ಲಿ ಮಾಹಿತಿಯನ್ನು ನಿಡಿ ಒಂದು ನಿರ್ದಿಷ್ಟ ಸಂಸ್ಥೆಯೊಂದಿಗೆ ಹಾಗೂ ಅದೇ ತರದ ಇನ್ನೊಂದು ಸಂಸ್ಥೆಯೊಂದಿಗೆ ಹೋಲಿಕೆ ಮಾಡಲು ಅವಕಾಶ ಕಲ್ಪಿಸಲು.

ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿಯು(ಬೆವಿಕಂ) ಕರ್ನಾಟಕ ಸರ್ಕಾರದ ಸ್ವಾಮ್ಮಕ್ಕೆ ಒಳಪಟ್ಟ ಸಾರ್ವಜನಿಕ ಸಂಸ್ಥೆಯಾಗಿದೆ. ಬೆವಿಕಂಪೆನಿಯು ಅಗಾಧ ಪ್ರಮಾಣದ ಮಾಹಿತಿಗಳ ವಿವಿಧ ಕಡತಗಳನ್ನು ನಿರ್ವಹಿಸುತ್ತದೆ. ಬೆವಿಕಂಪೆನಿಯ ಎಲ್ಲ ಮಾಹಿತಿಗಳನ್ನು ಕಡತಗಳಲ್ಲಿ ದಾಖಲಿಸಿ ನಿರ್ವಿಸಲ್ಪಟ್ಟಿದ್ದು, ಇವು ಬೆವಿಕಂಪೆನಿಯ ಕಾರ್ಯಾಚರಣೆಗೆ ಅತ್ಯಮೂಲ್ಯವಾಗಿವೆ.
ಪ್ರಸ್ತುತ ಕಡತಗಳನ್ನು ದಾಖಲೆ ಕೊಠಡಿಯಲ್ಲಿ ಅಡ್ಡಪಟ್ಟಿ ಗೂಡು/ಬೀರು/ಕಪಾಟುಗಳಲ್ಲಿ ನಿರ್ವಹಿಸಲಾಗುತ್ತಿದೆ. ಕಾಲಾನುಕ್ರಮವಾಗಿ ಈ ಕಡತಗಳು ಹಾಳಾಗುತ್ತವೆ, ಜೊತೆಗೆ ಕಡತದಲ್ಲಿನ ಮಾಹಿತಿಯು ಸಿದ್ಧಸಮಯದಲ್ಲಿ ಲಭ್ಯವಾಗುವುದಿಲ್ಲ. ಇದರಿಂದ ಕೆಲವೊಮ್ಮೆ ಕ್ಲಿಷ್ಟಕರ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅಸಾಧ್ಯವಾಗುತ್ತದೆ. ಸಾರ್ವಜನಿಕ ಮಾಹಿತಿಯ ದಾಖಲೆಗಳನ್ನು ಅಂಕೀಕರಣಗೊಳಿಸುವ ಅವಶ್ಯಕತೆ ಇದ್ದು, ಈಗಿನ ಮಾಹಿತಿ ಕೇಳಿಕೆ ಹಕ್ಕು ಚಾಲನೆಯಲ್ಲಿರುವ ಈ ಯುಗದಲ್ಲಿ ದಾಖಲೆಗಳನ್ನು ಸ್ಕ್ಯಾನ್ ಹಾಗೂ ಅಂಕೀಕರಣಗೊಳಿಸುವುದರಿಂದ ಬೆವಿಕಂಪೆನಿಯು ಸಾರ್ವಜನಿಕರಿಗೆ ಮಾಹಿತಿಗಳನ್ನು ಒದಗಿಸಲು ಅನುಕೂಲವಾಗುತ್ತದೆ.
ಆದ್ದರಿಂದ, ಬೆವಿಕಂಪೆನಿಯ ಜಾಲತಾಣದಲ್ಲಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲು ಬೆವಿಕಂಪೆನಿಯ ಕಡತಗಳನ್ನು ಸ್ಕ್ಯಾನ್ ಮಾಡಿ ಅಂಕೀಕರಣಗೊಳಿಸುವ ಕಾರ್ಯಪ್ರಕ್ರಿಯೆ ಕೈಗೊಳ್ಳಲಾಗಿದೆ.