3. ಬೆವಿಕಂ ವತಿಯಿಂದ ದಿನಾಂಕ 03.11.2018 ರಂದು ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ.

ಬೆವಿಕಂ ವತಿಯಿಂದ ದಿನಾಂಕ 03.11.2018 ರಂದು ಆಯೋಜಿಸಲಾಗಿದ್ದ ತಾಲ್ಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ


ವಿದ್ಯುತ್ ಸುರಕ್ಷತೆ, ಸಂರಕ್ಷತೆ ಹಾಗು ವಿದ್ಯುತ್ ಅಪಘಾತಗಳನ್ನು ತಡೆಹಿಡಿಯಲು ಬೆವಿಕಂ ತನ್ನ ಗ್ರಾಹಕರಿಗೆ ಅರಿವು ಮೂಡಿಸುವ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.


ತತ್ಸಂಬಂಧ, ವಿದ್ಯಾರ್ಥಿಗಳಲ್ಲಿ ವಿದ್ಯುತ್ ಸುರಕ್ಷತೆ, ವಿದ್ಯುತ್ ಸಂರಕ್ಷತೆ ಮತ್ತು ನವೀಕರಿಸಬಹುದಾದ ಇಂಧನದ ಬಗ್ಗೆ ಅರಿವು ಮೂಡಿಸಲು, ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ ರಚನೆ ಇತ್ಯಾದಿ ಸ್ಪರ್ಧೆಗಳನ್ನು ನಡೆಸಲು ಬೆವಿಕಂ ಪ್ರಸ್ತಾಪಿಸಿದೆ.


ಈ ನಿಟ್ಟಿನಲ್ಲಿ, ಮೊದಲನೆಯ ಹೆಜ್ಜೆಯಾಗಿ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಸಹಯೋಗದೊಂದಿಗೆ ಬೆವಿಕಂ ವ್ಯಾಪ್ತಿಗೆ ಒಳಪಡುವ ಎಲ್ಲಾ 52 ತಾಲ್ಲೂಕಿನ ಪ್ರಾಥಮಿಕ, ಪ್ರೌಢ ಶಿಕ್ಷಣ ಮತ್ತು ಪದವಿ ಪೂರ್ವ ಶಿಕ್ಷಣ ಕಾಲೇಜುಗಳ ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆಯನ್ನು ತಾಲ್ಲೂಕು ಮಟ್ಟದಲ್ಲಿ ದಿನಾಂಕ 03.11.2018 ರಂದು ಏರ್ಪಡಿಸಲಾಗಿತ್ತು. ಸದರಿ ತಾಲ್ಲೂಕು ಮಟ್ಟದ ಚಿತ್ರಕಲೆ ಸ್ಪರ್ಧೆಯಲ್ಲಿ 5176 ಸಂಖ್ಯೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು, ವಿದ್ಯಾರ್ಥಿಗಳ ಚಿತ್ರಕಲೆಗಳನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನ ಮೌಲ್ಯ ಮಾಪಕರಿಂದ ಪರಿಶೀಲಿಸಲಾಗಿರುತ್ತದೆ.


ಚಿತ್ರಕಲೆ ಸ್ಪರ್ಧೆಯಲ್ಲಿ 243 ವಿದ್ಯಾರ್ಥಿಗಳು ವಿಜೇತರಾಗಿದ್ದು, ವಿಜೇತರಾದ ತಾಲ್ಲೂಕುವಾರು ವಿದ್ಯಾರ್ಥಿಗಳಿಗೆ ನಗದು ಹಾಗೂ ಪ್ರಮಾಣಪತ್ರವನ್ನು ನೀಡಲಾಗಿರುತ್ತದೆ.


  • ಪ್ರಥಮ ಬಹುಮಾನ : ರೂ. 750/-
  • ದ್ವಿತೀಯ ಬಹುಮಾನ : ರೂ. 500/-
  • ತೃತೀಯ ಬಹುಮಾನ : ರೂ. 250/-

  • ಆಯ್ಕೆ ಮಾಡಲ್ಪಟ್ಟ ಚಿತ್ರಕಲೆಗಳಲ್ಲಿ ಅತ್ಯುತ್ತಮವಾಗಿ ಹಾಗೂ ಅರ್ಥಪೂರ್ಣವಾಗಿ ಮೂಡಿಬಂದಿರುವ ಚಿತ್ರಕಲೆಗಳನ್ನು ಬೆವಿಕಂ ನ 2019 ನೇ ವರ್ಷದ ಕ್ಯಾಲೆಂಡರ್‍ಗೆ ಬಳಸಲಾಗಿದ್ದು, ಕ್ಯಾಲೆಂಡರ್‍ಗೆ ಆಯ್ಕೆಯಾಗಿರುವ ವಿದ್ಯಾರ್ಥಿಗಳ ಚಿತ್ರಕಲೆಗಳಿಗೆ ಬಹುಮಾನ ಮೊತ್ತ ರೂ. 5000/- ಹಾಗೂ ಅಭಿನಂದನಾ ಪತ್ರವನ್ನು ನೀಡಲಾಗಿರುತ್ತದೆ.


    ಈ ಮೂಲಕ ಬೆವಿಕಂ, ಬೆಳೆಯುವ ಮಕ್ಕಳಲ್ಲಿ ಸುಪ್ತವಾಗಿರುವ ಕಲೆಯ ಪ್ರತಿಭೆಯನ್ನು ಅರ್ಥಪೂರ್ಣ ರೀತಿಯಲ್ಲಿ ಹೊರತಂದಿದೆ. ಅಲ್ಲದೆ, ಸುಸ್ಥಿರ ಅಸ್ತಿತ್ವ ಮತ್ತು ಪರಿಸರ ಸಂರಕ್ಷಣೆಗೆ ಪ್ರಮುಖ ಆಧಾರವಾಗಿರುವ ವಿದ್ಯುತ್ ಸಂರಕ್ಷಣೆ ಹಾಗು ನವೀಕರಿಸಬಹುದಾದ ಇಂಧನ ಉತ್ಪಾದನೆÀ ಕುರಿತಾದ ಪರಿಕಲ್ಪನೆಯನ್ನು ಭವ್ಯ ಭಾರತದ ಭವಿಷ್ಯದ ಅಡಿಪಾಯವಾಗಿರುವ ಯುವ ಪೀಳಿಗೆಯ ಮನಸ್ಸಿನಲ್ಲಿ ಹುಟ್ಟು ಹಾಕಿದೆ.


  • ಕ್ಯಾಲೆಂಡರ್‍ಗೆ ಬಳಸಲಾದ ಅತ್ಯುತ್ತಮ ಚಿತ್ರಕಲೆಗಳು – ಇಲ್ಲಿ ಕ್ಲಿಕ್ ಮಾಡಿ
  • ಬಹುಮಾನ ವಿಜೇತರ ಪಟ್ಟಿ – ಇಲ್ಲಿ ಕ್ಲಿಕ್ ಮಾಡಿ