ಸುರಕ್ಷತೆ

1. ಆರ್ತ್ ಲೀಕೇಜ್ ಸರ್ಕ್ಯೂಟ್ ಬ್ರೇಕರ್‍ಸ್ (ಈಎಲ್‌ಸಿಬಿ) ಅಳವಡಿಸುವ ಅಗತ್ಯವಿದೆಯೇ?

ನಿಮ್ಮ ಮನೆಯಲ್ಲಿ ಈಎಲ್‌ಸಿಬಿ ಅಳವಡಿಸುವಿಕೆಯನ್ನು ಶಿಫಾರಸು ಮಾಡಲಾಗುತ್ತದೆ ಏಕೆಂದರೆ ಇದು ನಿಮ್ಮನ್ನು ವಿದ್ಯುತ್ ಶಾಕ್ ಗಳಿಂದ ರಕ್ಷಿಸುತ್ತದೆ. ಸರ್ಕಿಟ್‌ನಲ್ಲಿ ಲೀಕೇಜ್‌ನಿಂದ ಹಲವಾರು ಸಲ ಟ್ರಿಪ್ ಆದರೂ ಅದನ್ನು ಕಡೆಗಣಿಸಬಾರದು, ಬದಲಾಗಿ ನುರಿತ ಇಲೆಕ್ಟ್ರಿಷಿಯನ್ ಮುಖಾಂತರ ವಿದ್ಯುತ್ ಉಪಕರಣಗಳು ಮತ್ತು ಸರ್ಕಿಟ್ ಗಳನ್ನು ಪರೀಕ್ಷಿಸಬೇಕು.

2. 30 mA ಸೆಟ್ಟಿಂಗ್ ಇರುವ ಈಎಲ್‌ಸಿಬಿ ಹಲವಾರು ಸಲ ಟ್ರಿಪ್ ಆಗಿ ತೊಂದರೆಯಾಗುತ್ತಿದೆ. ಹೀಗಿರುವಾಗ ಹೆಚ್ಚಿನ ಸೆಟ್ಟಿಂಗ್ ಇರುವ ಈಎಲ್‌ಸಿಬಿ ಅಳವಡಿಸಬಹುದೇ?

30 mA ಗಿಂತ ಹೆಚ್ಚಿನ ವಿದ್ಯುತ್ ಲೀಕೇಜ್ ಮಾನವನ ದೇಹವನ್ನು ಪ್ರವಹಿಸಿದರೆ, ಅವನು ಸರ್ಕಿಟ್‌ನ ಭಾಗವಾಗುತ್ತಾನೆ ಮತ್ತು ಕೆಲವು ಕ್ಷಣಗಳ ಕಾಲ ಇದು ಹೃದಯ ಸ್ಥಂಭನಕ್ಕೆ ಕಾರಣವಾಗುತ್ತದೆ. ಹೀಗಾಗಿ ೩೦ ಎಮ್‌ಎಗಿಂತ ಹೆಚ್ಚಿನ ಈಎಲ್‌ಸಿಬಿ ಅಳವಡಿಸುವಿಕೆ ಸೂಕ್ತವಲ್ಲ. ಟ್ರಿಪ್ಪಿಂಗ್‌ನ ಕಾರಣ ಮತ್ತು ಸರ್ಕಿಟ್‌ನ ಸಂಭಾವ್ಯ ಲೀಕೇಜನ್ನು ಗುರುತಿಸಿ ಸರಿಪಡಿಸಬೇಕು.

3. ಸ್ನಾನ ಮಾಡುವಾಗ ಗೀಸರನ್ನು ಒದ್ದೆ ಕೈಗಳಿಂದ ಮುಟ್ಟಬಹುದೇ?

ಒದ್ದೆ ಕೈ ವಿದ್ಯುತ್‌ನ ಒಂದು ಒಳ್ಳೆಯ ಕಂಡಕ್ಟರ್ ಆಗಿದೆ, ಆದುದರಿಂದ ಯಾವತ್ತೂ ಒದ್ದೆ ಕೈಗಳಿಂದ ಸ್ವಿಚ್ ಮುಟ್ಟಬೇಡಿ. ಮೊದಲು ನಿಮ್ಮ ಕೈಯನ್ನು ಟವಲ್‌ನಿಂದ ಉಜ್ಜಿ ಮತ್ತೆ ಸ್ವಿಚ್ ಮುಟ್ಟಬೇಕು.

4. ನಿಮ್ಮ ಮನೆಯ ವಿದ್ಯುತ್ ವೈರಿಂಗ್ ಉತ್ತಮ ಸ್ಥಿತಿಯಲ್ಲಿರುವುದೇ ಎಂದು ಯಾರ ಮುಖಾಂತರ ಪರೀಕ್ಷಿಸಬೇಕು?

ಲೈಸನ್ಸ್ ಹೊಂದಿದ ಇಲೆಕ್ಟ್ರಿಕಲ್ ಕಾಂಟ್ರಾಕ್ಟರ್ ಮುಖಾಂತರ ಇದನ್ನು ಪರೀಕ್ಷಿಸಬೇಕು.

5. ವಿದ್ಯುತ್ ಸರಬರಾಜು ವ್ಯವಸ್ಥೆಯಲ್ಲಿ ನ್ಯೂಟ್ರಲ್ ಮತ್ತು ಆರ್ತ್ ಇದರ ಉದ್ದೇಶವೇನು?

ವಿದ್ಯುತ್ ಸರಬರಾಜು ಲೈನ್‌ನಲ್ಲಿರುವ ನ್ಯೂಟ್ರಲ್ ವಿದ್ಯುತ್‌ಗೆ ರಿಟರ್ನ್ ಪಾತ್ ಕೊಡುತ್ತದೆ ಮತ್ತು ಅರ್ತ್ ಸಂಪರ್ಕ ವಿದ್ಯುತ್ ಉಪಕರಣಗಳನ್ನು ಲೀಕೇಜ್‌ಗಳಿಂದ ಸಂರಕ್ಷಿಸುತ್ತದೆ. ಈಎಲ್‌ಸಿಬಿಯ ಸರ್ಕಿಟ್‌ನಲ್ಲಿ ಆತ್ ಸಂಪರ್ಕ ಒಂದು ಮುಖ್ಯ ಅಂಗವಾಗಿದೆ.

6.ಯಾರ ಮೇಲಾದರೂ ವಿದ್ಯುತ್ ಪ್ರವಹಿಸಿ ತೊಂದರೆಯುಂಟಾದರೆ ಏನು ಮಾಡಬೇಕು?

ವಿದ್ಯುತ್ ಅವಘಡಗಳಾದ ಸಂದರ್ಭದಲ್ಲಿ ಮೊದಲು ಸ್ವಿಚ್ ಆಫ್ ಮಾಡಬೇಕು. ಯಾವುದಾದರೂ ಒಣಗಿದ ಮರದ ಹಲಗೆಯ ಮೇಲೆ ನಿಂತು ನಿಮ್ಮನ್ನು ರಕ್ಷಿಸಿಕೊಳ್ಳಿ ಮತ್ತು ವಿದ್ಯುತ್ ಮೈಮೇಲೆ ಪ್ರವಹಿಸಿದ ವ್ಯಕ್ತಿಯನ್ನು ವಿದ್ಯುತ್ ಸಂಪರ್ಕದಿಂದ ಬೇರ್ಪಡಿಸಿ. ಕೂಡಲೇ ವೈದ್ಯರನ್ನು ಕರೆತನ್ನಿ ಮತ್ತು ವೈದ್ಯಕೀಯ ನೆರವು ಬರುವ ತನಕ ವ್ಯಕ್ತಿಗೆ ಕೃತಕ ಉಸಿರಾಟ ನೀಡುವಲ್ಲಿ ಸಹಕರಿಸಿ.

7. ವಿದ್ಯುತ್‌ನಿಂದ ಉಂಟಾದ ಬೆಂಕಿಯ ಸಂದರ್ಭದಲ್ಲಿ ನೀರನ್ನು ಉಪಯೋಗಿಸಬಹುದೇ? ವಿದ್ಯುತ್ ವೈರಿಂಗ್/ ಉಪಕರಣದಲ್ಲಿ ಬೆಂಕಿ ಕಾಣಿಸಿಕೊಂಡರೆ ಏನು ಮಾಡಬೇಕು?

ಇಲ್ಲ. ಬೆಂಕಿ ಕಾಣಿಸಿಕೊಂಡ ಸರ್ಕಿಟ್ ನಲ್ಲಿ ವಿದ್ಯುತ್ ಪ್ರವಹಿಸುತ್ತಿರುವಾಗ ನೀರು ಉಪಯೋಗಿಸಬಾರದು. ಹೊತ್ತಿ ಉರಿಯುತ್ತಿರುವ ವಿದ್ಯುತ್ ಉಪಕರಣದ ಬೆಂಕಿಯನ್ನು ಆರಿಸಲು ನೀರು ಉಪಯೋಗಿಸುವ ಮೊದಲು ವಿದ್ಯುತ್ ಸಂಪರ್ಕವನ್ನು ಕಡಿಯಬೇಕು (ಸರ್ಕಿಟನ್ನು ನಿರ್ಜೀವಗೊಳಿಸಬೇಕು).