ಗ್ರಾಹಕ

1.ವಿದ್ಯುತ್ ಸಂಪರ್ಕ ನೀಡಲಾದ ಹೆಸರಿನ ಬದಲಾವಣೆ ಮಾಡಲು ಅನುಸರಿಸಬೇಕಾದ ಕ್ರಮಗಳೇನು?

ಈ ಬಗ್ಗೆ ಔಪಚಾರಿಕ ವಿನಂತಿ ಪತ್ರವನ್ನು ನಿಮ್ಮ ಗ್ರಾಹಕ ಸಂಖ್ಯೆ, ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಎಲ್ಲ ಉಪ ವಿಭಾಗಗಳಲ್ಲಿರುವ ಸೌಜನ್ಯ ಕೌಂಟರ್‌ಗಳಲ್ಲಿ ಈ ಕೆಳಗಿನ ದಾಖಲೆಗಳೊಂದಿಗೆ ಸಲ್ಲಿಸಬೇಕು. ಹೆಸರಿನ ಬದಲಾವಣೆಗಾಗಿ ಒಂದು ಔಪಚಾರಿಕ ವಿನಂತಿ ಪತ್ರ ಹಿಂದಿನ ಸೇಲ್ ಅಗ್ರೀಮೆಂಟ್‌ನ ಒಂದು ಪ್ರತಿ, ಬಿಲ್ಡರ್/ ಮಾಕ/ ಸೊಸೈಟಿಯ ನಿರಕ್ಷೇಪಣಾ ಪತ್ರ, ಸೇಲ್ ಡೀಡ್, ತೆರಿಗೆ ಪಾವತಿ ರಶೀದಿಗಳ ಪ್ರತಿ ಮತ್ತು ಕೊನೆಗೆ ಪಾವತಿಸಲಾದ ವಿದ್ಯುತ್ ಬಿಲ್ಲಿನ ಪ್ರತಿ.
ಹೀಗೆ ಎಲ್ಲಾ ದಾಖಲೆಗಳನ್ನು ಸಲ್ಲಿಸಿ, ಹೆಸರು ಬದಲಾವಣೆಗೆ ಇರುವ ಶುಲ್ಕವನ್ನು ಸೌಜನ್ಯ ಕೌಂಟರ್‌ನಲ್ಲಿ ಪಾವತಿಸಬೇಕು. ಹೀಗೆ ಮಾಡಿದ ತರುವಾಯದ ವಿದ್ಯುತ್ ಬಿಲ್ಲಿನಲ್ಲಿ ಹೆಸರು ಬದಲಾವಣೆ ಮಾಡಲಾಗುವುದು.

2. ವಿದ್ಯುತ್ ಲೋಡ್‌ನ ಹೆಚ್ಚಳ/ ಕಡಿಮೆಗೊಳಿಸಲು ಅನುಸರಿಸಬೇಕಾದ ಕ್ರಮಗಳೇನು?

ನಿಮ್ಮ ಪ್ರಸಕ್ತ ವಿದ್ಯುತ್ ಲೋಡ್ ಮತ್ತು ನಿಮಗೆ ಹೆಚ್ಚು/ಕಡಿಮೆ ಲೋಡ್ ಬೇಕಾಗಿರುವ ಬಗ್ಗೆ ಒಂದು ಒಔಪಚಾರಿಕ ವಿನಂತಿ ಪತ್ರವನ್ನು ಸಲ್ಲಿಸಬೇಕು. ಇದನ್ನು ನಿಮ್ಮ ಸಬ್‌ಡಿವಿಷನ್ ಕಚೇರಿಯಲ್ಲಿ ಸಲ್ಲಿಸಬೇಕು. ನಿಮ್ಮ ವಿದ್ಯುತ್ ಲೋಡ್ ಅವಶ್ಯಕತೆಗನುಗುಣವಾಗಿ ನೀವು ಪಾವತಿಸಬೇಕಾದ ಶುಲ್ಕದ ಬಗ್ಗೆ ಸಬ್ ಡಿವಿಷನ್ ಅಧಿಕಾರಿಗಳು ನಿಮಗೆ ತಿಳಿಸಬಹುದು. ಈ ಶುಲ್ಕದ ಮೊತ್ತವನ್ನು ನೀವು ಬೆ ವಿ ಕಂ ಹೆಸರಿನಲ್ಲಿ ಕ್ರಾಸ್ಡ್ ಚೆಕ್, ಡಿಡಿ ಮುಖಾಂತರ ಸಲ್ಲಿಸಬೇಕು. ಹೀಗೆ ಎಲ್ಲ ದಾಖಲೆಗಳನ್ನು ನಿಯಮಗಳಾನುಸಾರ ಸಲ್ಲಿಸಿದ ತರುವಾಯದ ನಂತರದ ಬಿಲ್ಲಿಂಗ್ ಅವಧಿಯಲ್ಲಿ ನಿಮ್ಮ ಕೋರಿಕೆ ನೆರವೇರಿಸಲಾಗುವುದು.
ಎಲ್‌ಟಿ ವಿಭಾಗದ ವಿದ್ಯುತ್ ಲೋಡ್ ಹೆಚ್ಚಳ/ಕಡಿಮೆಗಾಗಿ ಅರ್ಜಿಯನ್ನು ಆಯಾ ಸಬ್‌ಡಿವಿಷನ್‌ನಲ್ಲಿ ಮತ್ತು ಹೆಚ್‌ಟಿ ವಿಭಾಗದ ಗ್ರಾಹಕರು ಆಯಾ ಡಿವಿಷನ್‌ಗಳಲ್ಲಿ ಸಲ್ಲಿಸಬೇಕು.

3. ವಿದ್ಯುತ್ ಕರ ವಿನಾಯಿತಿ ಪಡೆಯಲು ಅನುಸರಿಸಬೇಕಾದ ಕ್ರಮಗಳೇನು?

ನಿಮ್ಮ ಗ್ರಾಹಕ ಸಂಖ್ಯೆ, ಹೆಸರು, ವಿಳಾಸ ಮತ್ತು ದೂರವಾಣಿ ಸಂಖ್ಯೆಯೊಂದಿಗೆ ಆಯಾ ಉಪ ವಿಭಾಗದಲ್ಲಿ ಈ ಕೆಳಗಿನ ದಾಖಲೆಗಳೊಂದಿಗೆ ಸಲ್ಲಿಸಬೇಕು. ಅ) ವಿದ್ಯುತ್ ಬಿಲ್ಲಿನಲ್ಲಿ ಕರ/ತೆರಿಗೆ ವಿನಾಯಿತಿಗಾಗಿ ಔಪಚಾರಿಕ ವಿನಂತಿ ಪತ್ರ. ಆ)ರಿಜಿಸ್ಟ್ರೇಷನ್ ಅರ್ಜಿಯ ಪ್ರತಿ/ಸಂಬಂಧಿತ ಪ್ರಾಧಿಕಾರದಿಂದ ಅನುಮೋದನೆ (ಇ) ಕರ ವಿನಾಯಿತಿಗಾಗಿ ಸೂಚಿಸಲ್ಪಟ್ಟ ಸ್ಥಳದಲ್ಲಿ ಕಾರ್ಯಚಟುವಟಿಕೆಗಳು ಪ್ರಾರಂಭವಾದ ದಿನಾಂಕ ಸೂಚಿಸುವ ಸರ್ಟಿಫಿಕೇಟ್ / ಪತ್ರ ಈ) ಸೇಲ್ ಡೀಡ್/ ಪಾರ್ಟ್‌ನರ್ ಶಿಪ್ ಡೀಡ್/ ಜಾಗದ ದಾಖಲೆಗಳು. ಉ) ಹೀಗೆ ಎಲ್ಲ ದಾಖಲೆಗಳು ಸಲ್ಲಿಸಿದ ತರುವಾಯದ ಬಿಲ್ಲಿಂಗ್ ಅವಧಿಯಲ್ಲಿ ವಿದ್ಯುತ್ ಕರ ವಿನಾಯಿತಿಯನ್ನು ಜಾರಿಗೊಳಿಸಲಾಗುವುದು.ಈ ಕೆಳಗಿನ ಕೈಗಾರಿಕೆಗಳು ತಮ್ಮ ಬಿಲ್ ನಲ್ಲಿ ವಿದ್ಯುತ್ ಕರ ವಿನಾಯಿತಿ ಪಡೆಯಲು ಅರ್ಹವಾಗಿವೆ. – ಎಸ್‌ಈಝೆಡ್, ಐಟಿ ಪಾರ್ಕ್‌ನಲ್ಲಿ ಸ್ಥಾಪಿಸಲ್ಪಟ್ಟ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಘಟಕಗಳು, ಶೇ ೧೦೦ ರಫ್ತು ಆಧರಿತ ಕೈಗಾರಿಕೆಗಳು, ರಫ್ತು ಆಧಾರಿತಾ ಸಂಸ್ಕರಣಾ ಘಟಕಗಳು, ಮತ್ತು ಎಲಕ್ಟಾನಿಕ್ ಹಾರ್ಡ್‌ವೇರ್ ತಂತ್ರಜ್ಞಾನ ಘಟಕಗಳು