ಬಿಲ್ಲಿಂಗ್

1. ವಿದ್ಯುತ್ ಬಳಕೆಯ ಅನುಸಾರ ಹೇಗೆ ಬಿಲ್ ಮಾಡಲಾಗುತ್ತದೆ?

ಬಳಕೆದಾರನ ವಿದ್ಯುತ್ ಬಿಲ್ ಅವನ ವಿಭಾಗ ಮತ್ತು ಅದಕ್ಕೆ ಅನ್ವಯಿಸುವ ದರದ ಮೇಲೆ ಅವಲಂಬಿತವಾಗಿದೆ.

2. ಒಂದು ಯೂನಿಟ್ ವಿದ್ಯುತ್ ಎಂದರೇನು ?

ಎಲ್ಲ ವಿದ್ಯುತ್ ಉಪಕರಣಗಳು ಸ್ವಿಚ್ ಆನ್ ಮಾಡಿದಾಗ ವಿದ್ಯುತ್ ಬಳಕೆ ಮಾಡುತ್ತವೆ. ಹೀಗೆ ಬಳಸಲಾದ ವಿದ್ಯುತ್ತನ್ನು ಕಿಲೋವ್ಯಾಟ್ ಅವರ್ಸ್(ಕೆಡಬ್ಲ್ಯೂ ಹೆಚ್)- ಒಂದು ಯೂನಿಟ್‌ಗೆ ಸಮ, ಇದರ ಮುಖಾಂತರ ಮಾಪನ ಮಾಡಲಾಗುತ್ತದೆ. ನೀವು ಉಪಯೋಗಿಸುವ ವಿದ್ಯುತ್ ಉಪಕರಣದ ವ್ಹಾಟ್ ಮತ್ತು ಉಪಯೋಗಿಸಲ್ಪಟ್ಟ ಗಂಟೆಯೊಂದಿಗೆ ಗುಣಿಸಿದಾಗ ಅದು ೧೦೦೦ ವ್ಹಾಟ್ ಅವರ್ಸ್‌ಗೆ ಸಮ ವಾಗುತ್ತದೆ. ಹೀಗೆ ಒಂದು
ಕೆಡಬ್ಲ್ಯೂಹೆಚ್ ಯಾ ಒಂದು ಯೂನಿಟ್ ವಿದ್ಯುತ್ ಬಳಕೆಯಾಗುತ್ತದೆ. ಹೀಗೆ ೧ಟ೦೦ ವ್ಯಾಟ್ ಬಲ್ಬ್ ಒಂದನ್ನು ೧೦ ಗಂಟೆ ಉಪಯೋಗಿಸಿದರೆ ಯಾ ೨ ಕೆವಿ (೨೦೦೦ ವ್ಯಾಟ್) ಗೀಸರನ್ನು ಅರ್ಧ ಗಂಟೆ ಉಪಯೋಗಿಸಿದರೆ ಒಂದು ಯೂನಿಟ್ ಬಳಕೆಗೆ ಸಮವಾಗುತ್ತದೆ.ನಿಮ್ಮ ವಿದ್ಯುತ್ ಮೀಟರ್ ನೀವು ಬಳಸುವ ಯೂನಿಟ್‌ಗಳನ್ನು ದಾಖಲಿಸುತ್ತದೆ ಮತ್ತು ಇದರ ಆಧಾರದಲ್ಲಿ ನಿಮಗೆ ವಿದ್ಯುತ್ ಬಿಲ್ ನೀಡಲಾಗುತ್ತದೆ.

3.ಮ್ಯಾಕ್ಸಿಮಮ್ ಡಿಮ್ಯಾಂಡ್(ಎಮ್‌ಡಿ) ಎಂದರೇನು?

ಓರ್ವ ಬಳಕೆದಾರ ಮೀಟರ್‌ನ ಅಂತರ್ಗತ ಗಡಿಯಾರದಲ್ಲಿ ೦೦ ಅವರ್‌ನಿಂದ ೩೦ ನಿಮಿಷಗಳ ಕಾಲ ಬಳಕೆ ಮಾಡಿದ ಅತಿ ಹೆಚ್ಚು ವಿದ್ಯುತ್ತನ್ನು ಮ್ಯಾಕ್ಸಿಮಮ್ ಡಿಮ್ಯಾಂಡ್ ಎನ್ನಲಾಗುತ್ತದೆ. ಟ್ರೈವೆಕ್ಟರ್ ಮೀಟರ್‌ನಲ್ಲಿ ಇದನ್ನು ಕೆವಿಯೆ ಎಂದು ಹೇಳಲಾಗುತ್ತದೆ.

4. ಪವರ್ ಫ್ಯಾಕ್ಟರ್ ಎಂದರೇನು?

ಹಲವಾರು ದೊಡ್ಡ ಗ್ರಾಹಕರು, ತiಗೆ ಅಗತ್ಯವಿರುವುದಕ್ಕಿಂತ ಹೆಚ್ಚು ವಿದ್ಯುಚ್ಛಕ್ತಿ ಪಡೆಯುತ್ತಾರೆ. ಹೀಗೆ ಯಾವುದೇ ಉಪಯುಕ್ತತೆಯಿಲ್ಲದ ಮಿಗತೆ ವಿದ್ಯುತ್ತನ್ನು ರಿಯಾಕ್ಟಿವ್ ಎನರ್ಜಿ ಎನ್ನಲಾಗುತ್ತದೆ ಮತ್ತು ಇದನ್ನು ರಿಯಾಕ್ಟಿವ್ ಯೂನಿಟ್‌ಗಳ ಮುಖಾಂತರ ಮಾಪನ ಮಾಡಲಾಗುತ್ತದೆ.ಈ ರಿಯಾಕ್ಟಿವ್ ಎನರ್ಜಿ ಲೋಡ್‌ನ ಪವರ್ ಫ್ಯಾಕ್ಟರ್‌ಗೆ ಸಂಬಂಧಿತವಾಗಿರುತ್ತದೆ. ಪವರ್ ಫ್ಯಾಕ್ಟರ್ ಕಡಿಮೆಯಿದ್ದಷ್ಟೂ ರಿಯಾಕ್ಟಿವ್ ಎನರ್ಜಿ ಹೆಚ್ಚಾಗಿರುತ್ತದೆ ಮತ್ತು ಇದು ವಿದ್ಯುತ್ ಸರಬರಾಜು ಕೇಬಲ್ ಮೇಲೆ ಹೆಚ್ಚಿನ ಒತ್ತಡ ಉಂಟು ಮಾಡುತ್ತದೆ. ಕೆಲವು ವಿದ್ಯುತ್ ಉಪಕರಣಗಳಾದ ಮೊಟರ್, ಏರ್‌ಕಂಡಿಷನರ್‌ಗಳು ಇತ್ಯಾದಿ ಕಡಿಮೆ ಪವರ್ ಫ್ಯಾಕ್ಟರ್ ಹೊಂದಿವೆ. ಕೆಪಾಸಿಟರ್‌ಗಳನ್ನು ಅಳವಡಿಸುವ ಮುಖಾಂತರ ಪವರ್ ಫ್ಯಾಕ್ಟರನ್ನು ಹೆಚ್ಚಿಸಬಹುದು. ಕೆಇಆರ್‌ಸಿ ನಿಗದಿಪಡಿಸಿದ ಸ್ತರಗಿಂತ ಪವರ್ ಫ್ಯಾಕ್ಟರ್ ಕಡಿಮೆಯಿದ್ದರೆ, ಪವರ್ ಫ್ಯಾಕ್ಟರ್ ದಂಡ ವಿಧಿಸಲಾಗುವುದು.

5. ಫ್ಯೂಲ್ ಎಡ್ಜಸ್ಟ್‌ಮೆಂಟ್ ಚಾರ್ಜಸ್ ಅಥವಾ ಎಫ್‌ಎಸಿ ಎಂದರೇನು?

ಪ್ರಸಕ್ತ ಇರುವ ವಿದ್ಯುಚ್ಛಕ್ತಿ ದರ ಉತ್ಪಾದನೆಗೆ ಉಪಯೋಗಿಸಿರುವ ಇಂಧನ ಮೂಲದ ಸರಿಸುಮಾರು ವೆಚ್ಚದ ಮೇಲೆ ಅವಲಂಬಿತವಾಗಿದೆ. ಇಂಧನದ ನೈಜ ದರ ಇದಕ್ಕಿಂತ ಬೇರೆಯಾಗಿರಬಹುದು. ಈ ದರದ ವ್ಯತ್ಯಾಸವನ್ನು ಸರಿದೂಗಿಸಲು ಫ್ಯೂಲ್ ಎಡ್ಜಸ್ಟ್‌ಮೆಂಟ್ ಚಾರ್ಜಸ್ ಅಥವಾ ಎಫ್‌ಎಸಿಯನ್ನು ವಿಧಿಸಲಾಗುತ್ತದೆ.

6. ವಿದ್ಯುಚ್ಛಕ್ತಿಯ ಮಾರಾಟದ ಮೇಲಿನ ತೆರಿಗೆ ಯಾವುದು?

ವಿದ್ಯುಚ್ಛಕ್ತಿಯ ಮಾರಾಟದ ಮೇಲಿನ ತೆರಿಗೆಯನ್ನು ಬೆ ವಿ ಕಂ/ಕೆಇಆರ್‌ಸಿ ನಿಯಮಾವಳಿಗಳ ಪ್ರಕಾರ ಮಾರಾಟ ಮಾಡಲಾದ ಎಲ್ಲಾ ಯೂನಿಟ್‌ಗಳ ಮೇಲೆ ವಿಧಿಸಲಾಗುವುದು.

7. ವಿಳಂಬಿತ ಪಾವತಿ ಶುಲ್ಕ(ಡಿಲೇಡ್ ಪೇಮೆಂಟ್ ಚಾರ್ಜಸ್ ಅಥವಾ ಡಿಪಿಸಿ) ಎಂದರೇನು?

ವಿದ್ಯುಚ್ಛಕ್ತಿ ಬಿಲ್ಲನ್ನು ಅದರಲ್ಲಿ ಸೂಚಿಸಿದ ಕೊನೆಯ ದಿನಾಂಕದೊಳಗೆ ಪಾವತಿಸದಿದ್ದಲ್ಲಿ, ಒಟ್ಟು ವಿದ್ಯುಚ್ಛಕ್ತಿ ಬಿಲ್ಲಿನ ಮೊತ್ತದ ಮೇಲೆ ಶೇಕಡಾ ಒಂದರಂತೆ ವಿಳಂಬಿತ ಪಾವತಿ ಶುಲ್ಕ (ತೆರಿಗೆ ಮತ್ತು ಕರ ಒಳಗೊಂಡು) ವಿಧಿಸಲಾಗುತ್ತದೆ. ಈ ಶುಲ್ಕವನ್ನು ಪಾವತಿಸುವ ದಿನಾಂಕವನ್ನು ಗಣನೆಗೆ ತೆಗೆದುಕೊಳ್ಳುವಾಗ “ಬಿಲ್ಲನ್ನು ಪಾವತಿಸಿದ ದಿನ” ಯಾ “ಬಿಲ್ಲಿನಲ್ಲಿ ನಮೂದಿಸಿದ ದಿನ” ಯಾ ’ಬಿಲ್ಲನ್ನು ಕೊಟ್ಟ ದಿನ”ವನ್ನು ಹೊರತುಪಡಿಸಲಾಗುವುದಿಲ್ಲ.

8. ಕನಿಷ್ಠ ಮಾಸಿಕ ದರವೆಂದರೇನು?

ಓರ್ವ ಗ್ರಾಹಕನು ವಿದ್ಯುಚ್ಛಕ್ತಿಯನ್ನು ಉಪಯೋಗಿಸದಿದ್ದ ಪಕ್ಷದಲ್ಲಿ ಕೂಡ ಪ್ರತಿ ತಿಂಗಳು ಕೊಡಬೇಕಾದ ಕನಿಷ್ಠ ದರವನ್ನು ಕನಿಷ್ಠ ಮಾಸಿಕ ದರವೆನ್ನಲಾಗುವುದು.

9.ಮಲ್ಟಿಪ್ಲಿಕೇಶನ್ ಫ್ಯಾಕ್ಟರ್ ಎಂದರೇನು ? ಇದು ಪ್ರತಿಯೋರ್ವ ಗ್ರಾಹಕನಿಗೆ ಬೇರೆಬೇರೆ ಯಾಕಾಗಿರುತ್ತದೆ?

*ಬಿಲ್ಲನ್ನು ಲೆಕ್ಕ ಮಾಡಲು ಮಲ್ಟಿಪ್ಲಿಕೇಶನ್ ಫ್ಯಾಕ್ಟರ್ ಉಪಯೋಗಿಸಲಾಗುವುದು.
*ವಿದ್ಯುಚ್ಛಕ್ತಿ ಮೀಟರ್‌ಗಳು ಸಾಮಾನ್ಯವಾಗಿ ೪೪೦ ವೋಲ್ಟ್ ವಿದ್ಯುತ್ ಸತತವಾಗಿ ಮತ್ತು ಗರಿಷ್ಠ ೪೦ ಎಎಮ್ ಪಿಎಸ್ ಸಾಮರ್ಥ್ಯ ಹೊಂದಿರುತ್ತವೆ.
* ಗ್ರಾಹಕರ ವಿದ್ಯುಚ್ಛಕ್ತಿ ಲೋಡ್ ೪೦ಎಗಿಂತ ಹೆಚ್ಚಾಗಿದ್ದರೆ ಯಾ ಸಪ್ಲೈ ವೋಲ್ಟೇಜ್ ೪೪೦ ವೋಲ್ಟ್‌ಗಿಂತ ಹೆಚ್ಚಿದ್ದರೆ ಮೀಟರಿಂಗ್ ಸರ್ಕಿಟ್‌ನಲ್ಲಿ ಕರೆಂಟ್ ಮತ್ತು ವೋಲ್ಟೇಜ್ ಟ್ರಾನ್ಸ್‌ಫಾರ್ಮರ್‌ಗಳನ್ನು ಉಪಯೋಗಿಸಲಾಗುತ್ತದೆ.
* ಈ ಟ್ರಾನ್ಸ್‌ಫಾರ್ಮರ್‌ಗಳು ಮೀಟರ್‌ಗೆ ಅನ್ವಯವಾಗುವ ವೋಲ್ಟೇಜ್ ಮತ್ತು ಕರೆಂಟನ್ನು ನಿರ್ದಿಷ್ಟ ಪ್ರಮಾಣದಲ್ಲಿ ಕಡಿಮೆಗೊಳಿಸುತ್ತದೆ. ಇದನ್ನು ಟ್ರಾನ್ಸ್‌ಫಾರ್ಮೇಶನ್ ಅನುಪಾತ(ರೇಶಿಯೋ) ಎನ್ನಲಾಗುತ್ತದೆ.
* ಹೀಗಾಗಿ ಮೀಟರ್‌ನಲ್ಲಿ ದಾಖಲಾಗುವ ವಿದ್ಯುತ್ ಉಪಯೋಗ ಪ್ರಮಾಣ, ನಿಜವಾಗಿ ಉಪಯೋಗಿಸಲ್ಪಡುವ ಪ್ರಮಾಣಕ್ಕಿಂತ ಕಡಿಮೆಯಾಗಿರುತ್ತದೆ.
* ಗ್ರಾಹಕನ ನಿಜವಾದ ವಿದ್ಯುಚ್ಛಕ್ತಿ ಉಪಯೋಗ ಪ್ರಮಾಣ ತಿಳಿಯಲು, ಮೀಟರ್‌ನಲ್ಲಿ ದಾಖಲಾದ ಸಂಖ್ಯೆಯನ್ನು ಪ್ರೊಪೋರ್ಷನಾಲಿಟಿ ಫ್ಯಾಕ್ಟರ್‌ಯಾ ಮಲ್ಟಿಪ್ಲೈಯಿಂಗ್ ಫ್ಯಾಕ್ಟರ್‌ನಿಂದ ಗುಣಿಸಬೇಕು.
*ಹೀಗೆ ಎಮ್‌ಎಫ್ =ಸಿಟಿ ಪ್ರಮಾಣ xವಿಟಿ ಪ್ರಮಾಣ
*ಒಂದು ನಿರ್ದಿಷ್ಟ ಗ್ರಾಹಕನ ಸಿಟಿ ಮತ್ತು ವಿಟಿ ಪ್ರಮಾಣವು ಗ್ರಾಹಕನ ಅಗತ್ಯತೆ ಮತ್ತು ಲೋಡ್‌ನ ಮೇಲೆ ಅವಲಂಬಿತವಾಗಿದೆ.

10. ವಿದ್ಯುಚ್ಛಕ್ತಿ ಬಿಲ್ಲಿನ ಉಪಾಂಗಗಳೇನು ?

ಗ್ರಾಹಕರ ವಿದ್ಯುಚ್ಛಕ್ತಿ ಬಿಲ್ ಈ ಕೆಳಗಿನ ಅಂಗಗಳನ್ನು ಹೊಂದಿದೆ. ಇದು ಈಗಿರುವ ದರಗಳ ಅನ್ವಯ ಮತ್ತು ಮುಂದೆ ಬದಲಾಗಬಹುದು.
೧ಗೃಹ/ಕೈಗಾರಿಕೆ/ವಾಣಿಜ್ಯ ಗ್ರಾಹಕರ (೯೪೦ ಕಿವಾಗಿಂತ ಕಡಿಮೆ) ಬಿಲ್ ಈ ಕೆಳಗಿನವುಗಳನ್ನು ಹೊಂದಿದೆ.
*ವಿದ್ಯುತ್ ಶುಲ್ಕ
*ನಿಗದಿತ ಶುಲ್ಕ
*ಫ್ಯೂಲ್ ಎಡ್ಜಸ್ಟ್‌ಮೆಂಟ್ ಶುಲ್ಕ (ಎಫ್‌ಎಸಿ)
*ವಿದ್ಯುತ್ ಕರ
*ವಿದ್ಯುತ್ ಮಾರಾಟದ ಮೇಲೆ ಕರ
*ವಿಳಂಬಿತ ಪಾವತಿ ಶುಲ್ಕ
೨)ಕೈಗಾರಿಕಾ ಮತ್ತು ವಾಣಿಜ್ಯ ಗ್ರಾಹಕರು(೪೦ ಕಿವಾಗಿಂತ ಅಧಿಕ)
*ಗರಿಷ್ಠ ಬೇಡಿಕೆ ಶುಲ್ಕ
*ಇಂಧನ ಶುಲ್ಕ
**ಫ್ಯೂಲ್ ಎಡ್ಜಸ್ಟ್‌ಮೆಂಟ್ ಶುಲ್ಕ (ಎಫ್‌ಎಸಿ)
*ವಿದ್ಯುತ್ ಕರ
*ವಿದ್ಯುತ್ ಮಾರಾಟದ ಮೇಲೆ ಕರ
*ವಿಳಂಬಿತ ಪಾವತಿ ಶುಲ್ಕ
*ಪವರ್ ಫ್ಯಾಕ್ಟರ್ ದಂಡ

11. ಓರ್ವ ಗ್ರಾಹಕ ತನ್ನ ವಿದ್ಯುತ್ ಬಳಕೆ ಪ್ರಮಾಣವನ್ನು ಹೇಗೆ ಲೆಕ್ಕಹಾಕಬಹುದು?

ವಿದ್ಯುತ್ ಉಪಕರಣಗಳ ಬಗೆ, ಅವುಗಳಿಗೆ ಬೇಕಾಗುವ ವಿದ್ಯುತ್ ಮತ್ತು ಅವುಗಳ ಮಾಸಿಕ ಯೂನಿಟ್ ಬಳಕೆ ಪ್ರಮಾಣ ಮತ್ತು ಅವುಗಳನ್ನು ಉಪಯೋಗಿಸುವ ಸಮಯದ ಆಧಾರದ ಮೇಲೆ ಈ ಕೆಳಗಿನ ಪಟ್ಟಿಯನ್ನು ಕೊಡಲಾಗಿದೆ. ಇದರ ಸಹಾಯದಿಂದ ನೀವು ಬಳಸುವ ವಿದ್ಯುತ್ತಿನ ಪ್ರಮಾಣವನ್ನು ಅಂದಾಜಿಸಬಹುದು. ನಿಮ್ಮ ಉಪಕರಣ ಬಳಸುವ ವಿದ್ಯುತ್ ಪ್ರಮಾಣವನ್ನು ಸರಿಯಾಗಿ ನೋಡಿಕೊಂಡು ನೀವು ಮತ್ತೂ ಕರಾರುವಕ್ಕಾಗಿ ನಿಮ್ಮ ಬಳಕೆಯನ್ನು ಅಂದಾಜಿಸಲು ಸಾಧ್ಯ. ಹಾಗೆಯೇ ನೀವು ಒಂದು ಉಪಕರಣವನ್ನು ಎಷ್ಟು ಗಂಟೆಗಳ ಕಾಲ ಉಪಯೋಗಿಸುತ್ತೀರಿ ಎಂಬುದನ್ನೂ ಗಮನಿಸಿ. ಈ ಬಗ್ಗೆ ಒಂದು ಉದಾಹರಣೆಯನ್ನು ಈ ಕೆಳಗಿನ ಲಿಂಕ್ ನಲ್ಲಿ ಕೊಡಲಾಗಿದೆconsumption.doc

12. ಬಿಲ್ಲಿಂಗ್ ಮತ್ತು ಮೀಟರಿಂಗ್ ಸಂಬಂಧಿತ ಕೆಲವು ಸಂದೇಹಗಳನ್ನು ಪರಿಹರಿಸಲು ಯಾರನ್ನು ಸಂಪರ್ಕಿಸಬೇಕು?

ಬಿಲ್ಲಿಂಗ್ ದೋಷಗಳನ್ನು ನಿವಾರಿಸಲು ಸಾಧ್ಯವಾದಷ್ಟು ಪ್ರಯತ್ನ ಮಾಡಲಾಗುತ್ತಿದೆಯಾದರೂ, ಗ್ರಾಹಕರು ಯಾವುದೇ ತೊಂದರೆಯಿದ್ದರೆ ತಂತಮ್ಮ ಪ್ರದೇಶ ವ್ಯಾಪ್ತಿಯ ಸೌಜನ್ಯ ಕೌಂಟರ್‌ಗಳನ್ನು ಸಂಪರ್ಕಿಸಬಹುದು.

13. ಗ್ರಾಹಕರಿಗೆ ಮೊದಲ ವಿದ್ಯುತ್ ಬಿಲ್ ದೊರೆಯದಿದ್ದಲ್ಲಿ ಏನು ಮಾಡಬೇಕು?

*ಎಲ್ಲಾ ಗ್ರಾಹಕರ ಮಾಪಕವನ್ನು ತಿಂಗಳಿಗೊಮ್ಮೆ ಸ್ಪಾಟ್ ಬಿಲ್ಲಿಂಗ್ ಮೆಶಿನ್ ಮುಖಾಂತರ ಮಾಪನ ಮಾಡಲಾಗುವುದು.
* ಮೀಟರ್ ರೀಡಿಂಗನ್ನು ಏರಿಯಾವಾರು ಮತ್ತು ಒಂದು ನಿರ್ದಿಷ್ಟ ದಿನದಂದು ಮಾಡಲಾಗುತ್ತದೆ.
* ಮೀಟರಿಂಗ್ ದಿನಾಂಕದ ತರುವಾಯ ಯಾವುದಾದರೂ ಹೊಸ ಗ್ರಾಹಕರ ಸೇರ್ಪಡೆಯ ವಿಷಯ ತಿಳಿದು ಬಂದರೆ ಅಂತಹ ಗ್ರಾಹಕರ ಪ್ರಥಮ ಬಿಲ್ ಮುಂದಿನ ತಿಂಗಳು ನೀಡಲಾಗುತ್ತದೆ.
* ಹೊಸ ಸಂಪರ್ಕ ಪಡೆದ ತರುವಾಯ ಎರಡು ತಿಂಗಳ ನಂತರವೂ ಬಿಲ್ ಬರದಿದ್ದರೆ, ಗ್ರಾಹಕರು ಸೌಜನ್ಯ ಕೌಂಟರನ್ನು ಕೂಡಲೇ ಸಂಪರ್ಕಿಸಬೇಕು.

14. ಬಿಲ್ ತಲುಪದಿದ್ದರೆ ಯಾ ಕಳೆದು ಹೋಗಿದ್ದರೆ ಏನು ಮಾಡಬೇಕು?

• ಗ್ರಾಹಕರು ತಮ್ಮ ಪ್ರದೇಶ ವ್ಯಾಪ್ತಿಯ ಸೌಜನ್ಯ ಕೌಂಟರನ್ನು ಸಂಪರ್ಕಿಸಿ ಬಿಲ್ಲಿನ ನಕಲು ಪ್ರತಿಯನ್ನು ಪಡೆಯಬೇಕು.