ಗ್ರಾಹಕ ಸಹಾಯವಾಣಿ

ಮೆ|| ಇನ್ಫೊಸಿಸ್ ಸಂಸ್ಥೆಯು ಒದಗಿಸಿರುವ ಇತ್ತೀಚಿನ ತಾಂತ್ರಿಕತೆ ಮತ್ತು ಅಭಿವೃದ್ಧಿತ ತಂತ್ರಾಂಶಗಳ ಮೂಲಕ ಬೆವಿಕಂಪೆನಿಯು ತನ್ನ ೨೪ *೭ ಗ್ರಾಹಕ ಕುಂದುಕೊರತೆ ಸಹಾಯ ವಾಣಿಯನ್ನು ಮತ್ತಷ್ಟು ಸದೃಢಗೊಳಿಸಿದೆ. ಬೆವಿಕಂಪೆನಿಯು ಆವಯ ಟೆಕ್ನಾಲಜಿಸ್ ಸಂಸ್ಥೆಯು ವಿನ್ಯಾಸಗೊಳಿಸಿರುವ ಸಹಾಯವಾಣಿ ೦೮೦-೨೨೮೭೩೩೩೩ ಸಂಖ್ಯೆಗೆ ದೂರನ್ನು ನೀಡಬಹುದಾಗಿದ್ದು, ಈ ದೂರವಾಣಿಯು ೨೫ ಸಹಮಾರ್ಗ ಸೌಲಭ್ಯವನ್ನು ಹೊಂದಿದ್ದು, ಇದರಲ್ಲಿ ಗ್ರಾಹಕರ ದೂರನ್ನು ಕ್ಷಿಪ್ರವಾಗಿ ಕರೆ ನಿರ್ವಹಣೆ ಕೇಂದ್ರದ ಕಾರ್ಯನಿರ್ವಾಹಕರಿಗೆ ವರ್ಗಾಯಿಸುವ ಸೌಲಭ್ಯವಿದೆ. ಈ ಸಹಾಯವಣಿಯ ಮೂಲಕ ಗ್ರಾಹಕರು ನೀಡಿದ ಪ್ರತಿಯೊಂದು ದೂರನ್ನು ದಾಖಲಿಸಿಕೊಂಡು, ಆ ಗ್ರಾಹಕರಿಗೆ ಡಾಕೆಟ್ ಸಂಖ್ಯೆಯನ್ನು ನೀಡಲಾಗುತ್ತದೆ. ಗ್ರಾಹಕರು ಆ ಡಾಕೆಟ್ ಸಂಖ್ಯೆಯ ಮೂಲಕ ತಾವು ನೀಡಿದ ದೂರು ಯಾವ ಹಂತದಲ್ಲಿದೆ ಎಂದು ಬೆವಿಕಂಪೆನಿ ವೆಬ್ ಸೈಟ್ ಅಥವಾ ಸಹಾಯ ವಾಣಿಯ ಮೂಲಕ ತಿಳಿದುಕೊಳ್ಳಬಹುದಾಗಿದೆ. ಈ ಸಹಾಯವಾಣಿಯು ಕಾರ್ಯನಿರತವಾಗಿದ್ದರೆ, ಈ ವ್ಯವಸ್ಥೆಯು ಆ ಗ್ರಾಹಕರಿಗೆ ಕಾರ್ಯನಿರತ ಮಾರ್ಗದ ಬಗ್ಗೆ ಮಾಹಿತಿ ನೀಡಿ, ಅವರ ಕರೆಯು ಸಹಾಯ ವಾಣಿಯ ಯಾರಾದರೂ ಒಬ್ಬ ಕಾರ್ಯನಿರ್ವಾಹಕರಿಗೆ ವರ್ಗಾಯಿಸುವವರೆಗೆ ತಡೆಹಿಡಿದಿರುತ್ತದೆ.