ಮಾಪಕ ಮತ್ತು ವಾಣಿಜ್ಯ

ವಾಣಿಜ್ಯ

ವಾಣಿಜ್ಯ ಶಾಖೆಯು ಆಗಸ್ಟ್ ೨೦೦೮ ರಂದು ಅಸ್ತಿತ್ವಕ್ಕೆ ಬಂದಿರುತ್ತದೆ. ಮಾಪಕಗಳ ಅಳವಡಿಕೆಯ ಪ್ರಗತಿ, ಬಿಲ್ ಸಿದ್ದಪಡಿಸುವಿಕೆಯಲ್ಲಿ ದಕ್ಷತೆ,, ದೋಷಪೂರಿತ ಮಾಪಕಗಳ ಬದಲಾವಣೆಯ ಮೇಲ್ವಿಚಾರಣೆ ಮಾಡುವುದು, ವಿತರಣಾ ನಷ್ಟವನ್ನು ಕಡಿಮೆಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ಕರ್ನಾಟಕ ವಿದ್ಯುಚ್ಛಕ್ತಿ ನಿಯಂತಣಾ ಆಯೋUವು ವಿತರಣಾ ನಷ್ಟದ ಬಗ್ಗೆ ನಿಗಧಿ ಪಡಿಸಿದ ಪ್ರಮಾಣ ಮಟ್ಟವನ್ನು ಸಾಧಿಸಲಾಗಿದ್ದು, ಕಳೆದ ೫ ವರ್ಷದ ಮಾಹಿತಿಯು ಈ ಕೆಳಕಂಡಂತಿದೆ.

ವರ್ಷ
ವಿತರಣಾ ನಷ್ಟ
ಕ.ವಿ.ನಿ.ಆ ಪ್ರಮಾಣ ಮಟ್ಟ
೨೦೦೬-೦೭
೨೩.೭೩
೨೪.೦೦
೨೦೦೭-೦೮
೧೯.೯೯
೨೨.೦೦
೨೦೦೮-೦೯
೧೬.೬೪
೨೦.೦೦
೨೦೦೯-೧೦
೧೫.೧೪
೧೭.೦೦
೨೦೧೦-೧೧
೧೪.೪೮
೧೫.೦೦
೨೦೧೧-೧೨ (ತತ್ಕಾಲೀನ)
೧೫.೩೭
೧೪.೫೦

ವಿತರಣಾ ನಷ್ಟವನ್ನು ಕಡಿಮೆ ಮಾಡಲು ಕೆಳಕಂಡಂತೆ ಕ್ರಮಗಳನ್ನು ಕೈಗೊಳ್ಳಲಾಗಿದೆ:

  • ಬೇಡಿಕೆಯನ್ನು ಹೆಚ್ಚಿಸುವ ಬಗ್ಗೆ
  • ವಿದ್ಯುತ್ ಕಳ್ಳತನವನ್ನು ಪತ್ತೆ ಹಚ್ಚಿ ಕೇಸ್ ದಾಖಲಿಸುವುದು ಮತ್ತು ಇತರೆ.
  • ವಿತರಣಾ ಪರಿವರ್ತಕಗಳು ಮತ್ತು ಫೀಡರ್‌ಗಳಲ್ಲಿ ಕಳ್ಳತನ ಪತ್ತೆ ಹಚ್ಚಲು ಸಂಬಂಧಿಸಿದ ಕಛೇರಿಯಿಂದ ಸಿಬ್ಬಂದಿಯನ್ನು ನಿಯೋಜಿಸುವುದು.

ವಿತರಣಾ ನಷ್ಟವನ್ನು ಕಡಿಮೆಮಾಡಲು ಹಣಕಾಸು ವರ್ಷ-೧೩ ಕ್ಕೆ ಕೆಳಕಂಡ ಯೋಜನೆಗಳನ್ನು ಪ್ರಸ್ತಾಪಿತ ಮಾಡಲಾಗಿದೆ:

ಸೂಕ್ಷ್ಮ ಮಾಪಕದ ಅನುಷ್ಠಾನ

  • ೫೦೦ ಏಗಿಂ ಮತ್ತು ಅದಕ್ಕೆ ಮೇಲ್ಪಟ್ಟು ಹೆಚ್.ಟಿ. ಸ್ಥಾವರಗಳಿಗೆ ೦.೫ ದರ್ಜೆಯ ಹೆಚ್.ಟಿ. ಮಾಪಕಗಳಿಂದ ೦.೨S ದರ್ಜೆಯ ’ಸಮಯಾಧಾರಿತ’ ಮಾಪಕಗಳಿಂದ ಬದಲಾಯಿಸುವುದು. ಹಾಲಿ ಇರುವ ಹೆಚ್.ಟಿ ಸ್ಥಾವರಗಳಲ್ಲಿ ೩ ಫೇಸ್ ೩ ವೈರ್ ಇರುವ ಮಾಪಕಗಳನ್ನು ೩ ಅಖಿ’s ಮತ್ತು ೩ Pಖಿ’s ಒಳಗೊಂಡ ೩ ಫೇಸ್ ೪ ವೈರ್ ಮಾಪಕಗಳಿಂದ ಬದಲಾಯಿಸಲಾಗುವುದು.
  • ವಿಶಿಷ್ಟ ರೀತಿಯ ಮಾಪಕಗಳನ್ನು ಗ್ರಾಮೀಣ ವಿತರಣಾ ಪರಿವರ್ತಕಗಳಿಗೆ ಅಳವಡಿಸಲು ಯೋಜನೆಯನ್ನು ರೂಪಿಸಲಾಗಿದೆ. ಇದರಿಂದ ವಿದ್ಯುತ್ ಪರಿಶೋಧನೆ ಮಾಡಲು ಅನುಕೂಲವಾಗುತ್ತದೆ.