ಆರ್ ಎ ಪಿ ಡಿ ಆರ್ ಪಿ ಭಾಗ-ಎ ದ ಬಗ್ಗೆ

  Introduction:

  1. RAPDRP ಕಾರ್ಯಕ್ರಮವು ಭಾರತ ಸರ್ಕಾರದ ಇಂಧನ ಸಚಿವಾಲಯದಿಂದ ರೂಪಿಸಲ್ಪಟ್ಟಿರುವ ವಿತರಣಾ ಜಾಲವನ್ನು ಬಲಪಡಿಸುವ ಪ್ರಮುಖ ಯೋಜನೆಯಾಗಿದ್ದು, ಇದನ್ನು 2008ರ ಜುಲೈ ತಿಂಗಳಲ್ಲಿ 11ನೆಯ ಪಂಚವಾರ್ಷಿಕ ಯೋಜನೆಯ(2007-12) ಅಡಿಯಲ್ಲಿ ಆರಂಭಿಸಲಾಯಿತು.
  2. ಈ ಯೋಜನೆಯ ಮುಖ್ಯ ಉದ್ದೇಶ ವಿದ್ಯುತ್ ಸರಬರಾಜು ಕಂಪನಿಗಳಲ್ಲಿ ಸಮಗ್ರವಾಗಿ ತಾಂತ್ರಿಕ ಹಾಗೂ ವಾಣಿಜ್ಯಾತ್ಮಕ ನಷ್ಟ ಪ್ರಮಾಣವನ್ನು 5 ವರ್ಷಗಳ ಅವಧಿಯೊಳಗೆ 15% ರಷ್ಟು ಕಡಿಮೆಗೊಳಿಸುವುದಾಗಿದೆ.
  3. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಕೈಗೊಳ್ಳಲಾಗಿದೆ.
   1. ಭಾಗ-ಎ : ಇದರಲ್ಲಿ ಮೂಲ ದತ್ತ ಮಾಹಿತಿಗಳನ್ನು ಪಡೆದುಕೊಂಡು ದಾಖಲೆಗೊಳಪಡಿಸುವುದು ಹಾಗೂ ವಿದ್ಯುತ್ ಬಳಕೆಯನ್ನು ಲೆಕ್ಕೀಕರಣಕ್ಕೊಳಪಡಿಸಿ ಲೆಕ್ಕ ಪರಿಶೋಧನೆಗೊಳಪಡಿಸುವುದು ಹಾಗೂ ಮಾಹಿತಿ ತಂತ್ರಜ್ಞಾನ ಆಧಾರಿತ ಗ್ರಾಹಕ ಸೇವಾ ಕೇಂದ್ರವನ್ನು ಸ್ಥಾಪಿಸಿವುದು ಒಳಗೊಂಡಿವೆ.
   2. ಭಾಗ-ಬಿ : ವಿತರಣ ಜಾಲವನ್ನು ಬಲ ಪಡಿಸುವ ಕೆಲಸಗಳನ್ನು ಒಳಗೊಂಡಿದೆ.
  4. ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳ ಪರವಾಗಿ ಸದರಿ ಯೋಜನೆಯನ್ನು ಕರ್ನಾಟಕದಲ್ಲಿ ಕಾರ್ಯಾನುಷ್ಠಾನಗೊಳಿಸಲು ಬೆ.ವಿ.ಕಂ ಯನ್ನು ನೋಡಲ್ ಸಂಸ್ಥೆಯಾಗಿ ನೇಮಿಸಲಾಗಿದೆ.
  5. ಈ ಯೋಜನೆಯಲ್ಲಿ, 2001ರ ಜನಗಣತಿಯ ಪ್ರಕಾರ 30,000ಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಪಟ್ಟಣಗಳು ಒಳಗೊಂಡಿವೆ. ವಿತರಣಾ ಕಂಪನಿಗಳವಾರು ಪಟ್ಟಣಗಳ ಸಂಖ್ಯೆ ಈ ಕೆಳಗಿನಂತಿದೆ:
  ವಿ.ಸ.ಕಂಪನಿ ಪಟ್ಟಣಗಳ ಸಂಖ್ಯೆ
  ಬೆ.ವಿ.ಕಂಪನಿ 25
  ಮ.ವಿ.ಕಂಪನಿ 11
  ಸೆಸ್ಕ್ 12
  ಹು.ವಿ.ಕಂಪನಿ 29
  ಗು.ವಿ.ಕಂಪನಿ 21
  ಒಟ್ಟು 98
  RAPDRP ಕಾರ್ಯಕ್ರಮದ ಭಾಗ-ಎ ಅಡಿಯಲ್ಲಿನ ಕಾಮಗಾರಿಗಳ ವಿಸ್ತೃತ ಉದ್ದೇಶ ಹೀಗಿವೆ:
  • ಎಲ್ಲಾ ವಿದ್ಯುತ್ ವಿತರಣಾ ಕಂಪನಿಗಳಿಗೆ ಏಕರೂಪದ ತಂತ್ರಾಂಶ
  • ಮಾಹಿತಿ ತಂತ್ರಜ್ಞಾನ ಕಾರ್ಯಬಾರಿಯು(ITIA) ಪ್ರತಿ ವಿದ್ಯುತ್ ವಿತರಣಾ ಕಂಪನಿಗಳ ಯೋಜನೆಯನ್ನು ಪ್ರತ್ಯೇಕವಾಗಿ ಪರಿಗಣಿಸುವುದು ಹಾಗೂ ಯೋಜನೆಯ ಒಟ್ಟಾರೆ ಮೇಲ್ವಿಚಾರಣೆ ಹಾಗೂ ಅಗತ್ಯ ಬೆಂಬ¯ ವನ್ನು ಎಲ್ಲಾ ವಿ.ವಿ.ಕಂಪನಿಗಳ ಅಧ್ಯಕ್ಷಕರ ಕಛೇರಿಯಿಂದ ಒದಗಿಸುವುದು
  • ಸುಮಾರು 57000 ಕಿ.ಮೀ ಹಾಗೂ 72+ ¯ ಕ್ಷ ಗ್ರಾಹಕರ ಡಿ.ಜಿ.ಪಿ.ಎಸ್. ಆಧಾರಿತ ಭೌಗೋಳಿಕ ಮಾಹಿತಿ ಪದ್ಧತಿ (ಜಿ.ಐ.ಎಸ್) ಸರ್ವೇಕ್ಷಣೆ ನಡೆಸುವುದು.
  • ಪರಿವರ್ತಕ ಕೇಂದ್ರಗಳು ಮತ್ತು ಊಖಿ ಗ್ರಾಹಕರಿಗೆ ಎ.ಎಂ.ಆರ್. ಅನುಷ್ಠಾನಗೊಳಿಸುವುದು.
  • ಗೊತ್ತುಪಡಿಸಿರುವ ಪಟ್ಟಣಗಳಲ್ಲಿ ಎಲ್.ಎ.ಎನ್, ಎಂ.ಪಿ.ಎಲ್.ಎಸ್.ವಿ.ಪಿ.ಎನ್ ಹಾಗೂ ಇತರ ಕಾರ್ಯಜಾಲದ ಅನುಷ್ಠಾನ.
  • ಪ್ರತಿ ವಿದ್ಯುತ್ ಸರಬರಾಜು ಕಂಪನಿಯಲ್ಲಿ ಕರೆಶುಲ್ಕರಹಿತ ದೂರವಾಣಿಯ ಒಂದು ಗ್ರಾಹಕ ಕರೆ ಕೇಂದ್ರದ ಸ್ಥಾಪನೆ.
  • 5000 ಕ್ಕೂ ಹೆಚ್ಚಿನ ವಿದ್ಯುತ್ ವಿತರಣಾ ಕಂಪನಿ ಅಧಿಕಾರಿ/ನೌಕರರಿಗೆ ತರಬೇತಿಯನ್ನು ನೀಡುವುದು.
  • ಕರ್ನಾಟಕದ ಪ್ರಾಯೋಗಿಕ ಪಟ್ಟಣ

   bescom

   ಗ್ರಾಹಕ ಕರೆ ಕೇಂದ್ರದ ಸ್ಥಳ

   bescom1
  • ಮಾಹಿತಿ ತಂತ್ರಜ್ಞಾನ ಕಾರ್ಯಬಾರಿಯು(ITIA) – ಎಲ್ಲಾ ಎಸ್ಕಾಂಗಳ ಪರವಾಗಿ, ಮೆ||ಇನ್ಫೊಸಿಸ್ ಲಿಮಿಟೆಡ್ ಸಂಸ್ಥೆಯನ್ನು ITIA ಯಾಗಿ ನೇಮಕ ಮಾಡಿಕೊಳ್ಳಲಾಗಿದೆ.
  • ಐ.ಟಿ ಸಮಾಲೋಚಕರು: -ಎಲ್ಲಾ ಎಸ್ಕಾಂಗಳಿಗಾಗಿ
   1. 2009 ರಿಂದ 2014 ರವರೆಗೆ ಮೆ|| ರಿಲೆಯನ್ಸ್ ಇನ್ ಪ್ರೋಸ್ಟ್ರ್‍ಕ್ಚರ್ ಲಿಮಿಟೆಡ್
   2. 2015 ರಿಂದ 2017 ರವರೆಗೆ ಮೆ|| ಇ ಅಂಡ್ ವೈ
  • TPIEA-IT – ಯೋಜನೆಯ ಅನುಷ್ಠಾನವು ಪೂರ್ಣಗೊಂಡಿರುವ ಬಗ್ಗೆ ಮೌಲ್ಯೀಕರಣಕ್ಕಾಗಿ ಪಿ.ಎಫ್.ಸಿ ಯು ಮೆ||ಪಿ.ಜಿ.ಸಿ.ಐ.ಎಲ್. ಸಂಸ್ಥೆಯನ್ನು ನೇಮಿಸಿದೆ.
  • ದತ್ತ ಮಾಹಿತಿ ಕೇಂದ್ರ – ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.
  • ವಿಪತ್ತು ನಿರ್ವಹಣೆ ಕೇಂದ್ರ – ಚೆನ್ನೈನಲ್ಲಿ ಸ್ಥಾಪಿಸಲಾಗಿದೆ.
  • ಪ್ರಾಥಮಿಕ ನೆಟ್‍ವರ್ಕ್ ಬ್ಯಾಂಡ್‍ವಿಡ್ತ್ ಸೇವಾ ಪೂರೈಕೆದಾರರು-ಮೆ|| ರಿಲಾಯನ್ಸ್ ಕಮ್ಯೂನಿಕೇಷನ್ಸ್‍ನ್ನು
  • ಸೆಕೆಂಡರಿ ನೆಟ್‍ವರ್ಕ್ ಬ್ಯಾಂಡ್‍ವಿಡ್ತ್ ಸೇವಾ ಪೂರೈಕೆದಾರರು– ಮೆ|| ಭಾರತಿ ಏರ್‍ಟೆಲ್ ಲಿಮಿಟೆಡ್
  Modules of RAPDRP Part A:

   There are 17 modules which are listed below which are to be implemented in the programme:

  1. Meter Data Acquisition (MDA)
  2. Energy Audit (EA)
  3. New Connection (NC)
  4. Disconnection & Dismantling (DD)
  5. Development of Commercial Database of Consumers (Comm DB)
  6. Metering (MBC)
  7. Billing (MBC)
  8. Collections (MBC)
  9. Centralized Customer Care Services (CCC)
  10. Web Self Service (WSS)
  11. Asset Management (WAMS)
  12. Asset Maintenance (WAMS)
  13. GIS based customer Indexing and asset mapping (GIS)
  14. GIS based integrated network analysis module (NA)
  15. Management Information System(MIS)
  16. System Security Requirement (SSR)
  17. Identity and Access Management system (IDAM)
  ಆರ್ಥಿಕ ಸ್ಥಿತಿ:
  1. ಭಾರತ ಸರ್ಕಾರವು, ಪಿ.ಎಫ್.ಸಿಯ ಮುಖಾಂತರ ಯೋಜನೆಯ 100% ಮೊತ್ತವನ್ನು ನೀಡಿರುತ್ತದೆ.
  2. ವಿವರವಾದ ಯೋಜನಾ ವರದಿಯನ್ನು ಸಲ್ಲಿಸಿದ ನಂತರ, 2009ರಲ್ಲಿ ರೂ.261.37 ಕೋಟಿ ಪಿ.ಎಫ್.ಸಿ/ಎಮ್.ಒ.ಪಿ ಯಿಂದ ಮಂಜೂರಾಗಿರುತ್ತದೆ. ತದನಂತರ, ಯೋಜನಾ ವರದಿಯನ್ನು ಜುಲೈ 2014 ರಲ್ಲಿ ರೂ.252.00 ಕೋಟಿ ಮೊತ್ತಕ್ಕೆ ಪರಿಷ್ಕ್ರರಿಸಿದೆ.
  3. ಯೋಜನೆಯ ಅನುಷ್ಠಾನವು ಪೂರ್ಣಗೊಂಡಿರುವ ಬಗ್ಗೆ ತೃತೀಯ ಖಾಸಗೀ ಮೌಲ್ಯೀಕರಣ ಏಜೆನ್ಸಿಯಾದ ಮೆ||ಪಿ.ಜಿ.ಸಿ.ಐ.ಎಲ್. ಸಂಸ್ಥೆಯು ಪರಿಶೀಲನೆ ನಡೆಸಿದ್ದು, ಪರಿಶೀಲನಾ ವರದಿಯ ಅಂಗೀಕಾರದ ನಂತರ ಸಾಲದ ಮೊಬಲಗನ್ನು ಅನುದಾನಕ್ಕೆ ಪರಿವರ್ತಿಸಲಾಗುವುದು.
  4. ದಿನಾಂಕ 28.02.2018 ರಂತೆ ಯೋಜನೆಯ ಆರ್ಥಿಕ ಸ್ಥಿತಿ ಕೆಳಗಿನಂತಿದೆ:
  5. ಎಸ್ಕಾಂ ಅರ್ಹ
   ಪಟ್ಟಣಗಳ ಸಂಖ್ಯೆ
   ಅನುಮೋದಿತ ಡಿ.ಪಿ.ಆರ್. ವೆಚ್ಚ ಮಂಜೂರಾದ ಸಾಲ ಪಿ.ಎಫ್.ಸಿಯಿಂದ ಬಿಡುಗಡೆಯಾದ ಮೊತ್ತ ಮಾಡಲಾಗಿರುವ ವೆಚ್ಚ

   ಪಿ.ಎಫ್.ಸಿ ಬೆವಿಕಂ ಒಟ್ಟು ವೆಚ್ಚ
   BESCOM 25 272.80 252 219.91 219.91 42.54 262.45
  ಯೋಜನೆಯ ಪ್ರಸಕ್ತ ಸ್ಥಿತಿಗತಿ:
  1. ಕರ್ನಾಟಕದ ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಲ್ಲಿರುವ 98 ಪಟ್ಟಣಗಳಲ್ಲಿ ಖಂPಆಖP ಕಾರ್ಯಕ್ರಮದ ಭಾಗ-ಎ ಅನ್ನು ಅನುಷ್ಠಾನಗೊಳಿಸಲಾಗಿದ್ದು, ದಿನಾಂಕ 23.03.2016ರಂದು ಕಾರ್ಯಾಚರಣೆಗೊಳಪಟ್ಟಿದೆ ಎಂದು ಕೇಂದ್ರ ಇಂಧನ ಸಚಿವಾಲಯದ ಪಿ.ಎಫ್.ಸಿ.ಗೆ ತಿಳಿಸಲಾಗಿದೆ.
  2. ಕಾರ್ಯಾಚರಣೆಯು ಪ್ರಾರಂಭಗೊಂಡ ದಿನಾಂಕದ ನಂತರ ಉದ್ದೇಶಿತ ಯೋಜನೆಯ ಅಡಿಯಲ್ಲಿ, ಐ.ಟಿ.ಐ.ಎ ಸಂಸ್ಥೆಯು ಒದಗಿಸುವ ಸೇವಾಸೌಲಭ್ಯದ ಅವಧಿಯು 01.04.2016ರಿಂದ 31.03.201ರವರೆಗೆ, ಅಂದರೆ 5 ವರ್ಷಗಳ ಅವಧಿಯದ್ದಾಗಿರುತ್ತದೆ.
  3. ಪಟ್ಟಣ, ಫೀಡರ್ ಮತ್ತು ಪರಿವರ್ತಕ ಮಟ್ಟದಲ್ಲಿ ಎನರ್ಜಿ ಆಡಿಟ್ ವರದಿಗಳನ್ನು ಪಡೆಯಲು, ವ್ಯವಸ್ಥೆಯು ಸಿದ್ಧವಾಗಿದೆ. ಉIS ನಲ್ಲಿ ಸ್ವತ್ತುಗಳ ಮತ್ತು ಗ್ರಾಹಕರ ಹೆಚ್ಚುವರಿ ಮಾಹಿತಿಯನ್ನು ನಿರಂತರವಾಗಿ ಅಪ್‍ಡೇಟ್ ಮಾಡಲಾಗುತ್ತಿದೆ. ನಿಯಂತ್ರಿ AT&C ನಷ್ಟವನ್ನು ಸಾಧಿಸಲು ನಿಯಮಿತವಾಗಿ ಮೀಟರ್/ ಮಾಡೆಮ್‍ಗಳ ಸಂವಹಣ ಮಟ್ಟವನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ.
  4. ಯೋಜನೆಯನ್ನು ಪೂರ್ಣಗೊಳಿಸುವ ಕಾಲಮಿತಿಯನ್ನು ಪಿ.ಎಫ್.ಸಿ.ಯು 30.09.2017 ರವರೆಗೆ ವಿಸ್ತರಿಸಿರುತ್ತಾರೆ ಹಾಗೆಯೇ ಆರ್ಥಿಕ ಮುಕ್ತಾಯ ದಿನಾಂಕವು 31.03.2018 ಆಗಿರುತ್ತದೆ.
  5. ಯೋಜನೆಯ ಅನುಷ್ಠಾನವು ಪೂರ್ಣಗೊಂಡಿದ್ದು ಈ ಬಗ್ಗೆ ತೃತೀಯ ಖಾಸಗೀ ಮೌಲ್ಯೀಕರಣ ಏಜೆನ್ಸಿಯಾದ ಮೆ||ಪಿ.ಜಿ.ಸಿ.ಐ.ಎಲ್. ಸಂಸ್ಥೆಯು ಪರಿಶೀಲನೆ ನಡೆಸಿ, ಪರಿಶೀಲನಾ ವರದಿಗಳನ್ನು ಪಿ.ಎಫ್.ಸಿ ಸಲ್ಲಿಸಿರುತ್ತಾರೆ.
  6. ಯೋಜನೆಯ ಆರ್ಥಿಕ ಮುಕ್ತಾಯಕ್ಕಾಗಿ ಅಂತಿಮ ಕ್ಲೇಮ್ಸ್ ಅನ್ನು ಪಿ.ಎಫ್.ಸಿ ಗೆ ಸಲ್ಲಿಸಲಾಗಿದೆ.

  ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯ (ಐ.ಪಿ.ಡಿ.ಎಸ್) ಅಡಿಯಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಕಾರ್ಯಕ್ರಮಗಳು :

  1. ಭಾರತ ಸರ್ಕಾರವು, ನಗರ ಪ್ರದೇಶಗಳಲ್ಲಿ ಮುಂದೆ ತಿಳಿಸಿರುವ ಉದ್ದೇಶಗಳುಳ್ಳ ಸಮಗ್ರ ವಿದ್ಯುತ್ ಅಭಿವೃದ್ಧಿ ಯೋಜನೆಯನ್ನು ಹಮ್ಮಿಕೊಂಡಿದೆ:
   • ಉಪ ಪ್ರಸರಣ ಹಾಗೂ ವಿತರಣ ಕಾರ್ಯಜಾಲವನ್ನು ಸದೃಢಗೊಳಿಸುವುದು.
   • ಫೀಡರುಗಳು/ವಿತರಣ ಪರಿವರ್ತಕಗಳು ಹಾಗೂ ಗ್ರಾಹಕರ ಸ್ಥಾಪನಗಳಿಗೆ ಮಾಪಕ ಅಳವಡಿಸುವುದು.
   • ವಿತರಣ ಕ್ಷೇತ್ರದಲ್ಲಿ ಮಾಹಿತಿ ತಂತ್ರಜ್ಞಾನಕ್ಕೆ ಅವಕಾಶ ಕಲ್ಪಿಸಿ, ವಿತರಣ ಕಾರ್ಯಜಾಲವನ್ನು ಸದೃಢಗೊಳಿಸುವುದು.
   • ಈ ಐ.ಪಿ.ಡಿ.ಎಸ್ಯೋಜನೆಯಲ್ಲಿ ಪು.ತ್ವವಿ.ಅ.ಸು. ಕಾರ್ಯಕ್ರಮವನ್ನು ವಿಲೀನಗೊಳಿಸಿ, ಈ ಕಾರ್ಯಕ್ರಮದಅನುಮೋದಿತ ವೆಚ್ಚವನ್ನು ಐ.ಪಿ.ಡಿ.ಎಸ್. ಕಾರ್ಯಕ್ರಮದಲ್ಲಿ ಮುಂದುವರಿಸುವುದು.
  2. ಸಮಗ್ರ ವಿದ್ಯುತ್ಅಭಿವೃದ್ಧಿಯೋಜನೆಯ (ಐ.ಪಿ.ಡಿ.ಎಸ್) ಅಡಿಯಲ್ಲಿ ಮಾಹಿತಿತಂತ್ರಜ್ಞಾನಆಧಾರಿತಕಾರ್ಯಕ್ರಮಗಳಿಗೆಅವಕಾಶಕಲ್ಪಿಸುವ ಪ್ರಸ್ತಾವನೆಯು, ಕರ್ನಾಟಕರಾಜ್ಯದ 124 ಪಟ್ಟಣಗಳ ಪೈಕಿ,ವಿದ್ಯುತ್ ವಿತ್ತೀಯ ನಿಗಮವುಗೊತ್ತುಪಡಿಸಿರುವ ಬೆ.ವಿ.ಕಂಪನಿಯ 20 ಪಟ್ಟಣಗಳನ್ನುಒಳಗೊಳ್ಳುತ್ತದೆ.2011ರಜನಗಣತಿಯ ಪ್ರಕಾರಗೊತ್ತುಪಡಿಸಿಕೊಂಡಿರುವಜನಸಂಖ್ಯೆಯು,ಪಟ್ಟಣಗಳಆಯ್ಕೆಯ ಮಾನದಂಡವಾಗಿದೆ:
   • ಸಮಗ್ರ ವಿದ್ಯುತ್ಅಭಿವೃದ್ಧಿಯೋಜನೆಯ (ಐ.ಪಿ.ಡಿ.ಎಸ್) ಅಡಿಯಲ್ಲಿವಿದ್ಯುತ್ ಸರಬರಾಜುಕಂಪನಿವಾರು ಪಟ್ಟಣಗಳ ಸಂಖ್ಯೆಯ ಮಾಹಿತಿ ಹೀಗಿದೆ:
   ವಿದ್ಯುತ್ ಸರಬರಾಜು ಕಂಪನಿ ಪಟ್ಟಣಗಳ ಸಂಖ್ಯೆ
   ಬೆ.ವಿ.ಕಂಪನಿ 20
   ಮ.ವಿ.ಕಂಪನಿ 18
   ಸೆಸ್ಕ್ 21
   ಹು.ವಿ.ಕಂಪನಿ 44
   ಗು.ವಿ.ಕಂಪನಿ 21
   ಒಟ್ಟು 124
  3. ಈ ಐ.ಪಿ.ಡಿ.ಎಸ್. ಕಾರ್ಯಕ್ರಮದಅಡಿಯಲ್ಲಿಒಳಪಡುವ ಮೇಲಿನ ಐದೂ ವಿದ್ಯುತ್ ಸರಬರಾಜುಕಂಪನಿಗಳ 124 ಪಟ್ಟಣಗಳಲ್ಲಿ, ಈ ವಿದ್ಯುತ್ ಸರಬರಾಜುಕಂಪನಿಗಳದತ್ತ ಮಾಹಿತಿಕೇಂದ್ರ / ವಿಪತ್ತು ನಿರ್ವಹಣಕೇಂದ್ರಗಳ ಹೆಚ್ಚುವರಿ ವೆಚ್ಚವನ್ನೂಒಳಗೊಂಡಂತೆ, ಮಾಹಿತಿತಂತ್ರಜ್ಞಾನಆಧಾರಿತಕಾರ್ಯಕ್ರಮಗಳಿಗೆಅವಕಾಶಕಲ್ಪಿಸುವ ವಿವರವಾದಕಾರ್ಯಯೋಜನಾ ವರದಿ ಹಾಗೂ ಮಂಜೂರಾದ ಮೌಲ್ಯದ ವಿವರ ಹೀಗಿದೆ:
  4. ವಿ.ಸ.ಕಂಪನಿ ಪಟ್ಟಣಗಳ ಸಂಖ್ಯೆ ವಿ.ಕಾ.ವ. ವೆಚ್ಚ ಮಂಜೂರಾದ ಮೊಬಲಗು ವ್ಯತ್ಯಾಸ ಮಂಜೂರಾದ ಪಿ.ಎಂ.ಎ. ಮೊಬಲಗು
   ಬೆ.ವಿ.ಕಂಪನಿ 20 8.23 7.38 0.85 0.17
   ದತ್ತ ಮಾಹಿತಿ-ವಿಪತ್ತು ನಿರ್ವಹಣೆ 63.56 26.54 37.02
   ಬೆ.ವಿ.ಕಂ. ಒಟ್ಟು 71.79 33.92 37.87
   ಮ.ವಿ.ಕಂಪನಿ 18 5.84 4.76 1.08 0.024
   ಸೆಸ್ಕ್ 21 7.33 6.81 0.52 0.034
   ಹು.ವಿ.ಕಂಪನಿ 44 10.57 10.22 0.35 0.051
   ಗು.ವಿ.ಕಂಪನಿ 21 7.55 6.27 1.28 0.031
   ಒಟ್ಟು 124 103.08 61.98 41.1 0.31
  5. ಕಾರ್ಯಕ್ರಮದ ಉದ್ದೇಶ :
  6. ಪು.ತ್ವ.ವಿ.ಅ.ಸು.ಕಾರ್ಯಕ್ರಮದಅಡಿಯಲ್ಲಿರುವ ಪ್ರಸಕ್ತ ಮಾಹಿತಿತಂತ್ರಜ್ಞಾನ ವ್ಯವಸ್ಥೆಯು, ಇಡೀರಾಜ್ಯದ ವಿದ್ಯುಚ್ಛಕ್ತಿ ಸಂಸ್ಥೆಗಳದತ್ತ ಮಾಹಿತಿಕೇಂದ್ರದ ವಿನ್ಯಾಸ / ವಿಪತ್ತು ನಿರ್ವಹಣೆಕೇಂದ್ರಗಳ ಪೂರ್ಣಅಗತ್ಯತೆಗಳ ಪೂರೈಕೆಗೆ ಸನ್ನದ್ಧವಾಗಿದೆ. ಹೆಚ್ಚುವರಿ ಪಟ್ಟಣಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲುದತ್ತ ಮಾಹಿತಿಕೇಂದ್ರ ಹಾಗೂ ವಿಪತ್ತು ನಿರ್ವಹಣಾಕೇಂದ್ರಗಳ ಹೆಚ್ಚುವರಿ ವೆಚ್ಚವಷ್ಟೇಅಗತ್ಯವಾಗಿದ್ದು, ಮಾಹಿತಿತಂತ್ರಜ್ಞಾನಆಧಾರಿತ ವಿದ್ಯುತ್ ಲೆಕ್ಕೀಕರಣ ಹಾಗೂ ಪರಿಶೋಧನೆ ವ್ಯವಸ್ಥೆಯ ಸೌಲಭ್ಯವನ್ನುಇಂತಹ ಹೆಚ್ಚುವರಿ ಪಟ್ಟಣಗಳಲ್ಲೂ ಪದೆದುಕೊಳ್ಳಬಹುದು. ಈ ಕಾರ್ಯಕ್ರಮವು, ಫೀಡರುವಾರು/ಪಟ್ಟಣವಾರುಗ್ರಾಹಕರದತ್ತ ಮಾಹಿತಿ ಹಾಗೂ ಬಿಲ್ ಬುಕ್ಅನ್ನುಸಿದ್ಧಪಡಿಸುವುದನ್ನುಒಳಗೊಳ್ಳುವುದರೊಂದಿಗೆ, ಪ್ರಸ್ತುತಇರುವ ಭೌಗೋಳಿಕ ಸೂಚ್ಯಂಕಅನ್ವಯಿಸುವಿಕೆಗೂ ಸಂಪರ್ಕಕಲ್ಪಿಸುತ್ತದೆ. ಇದರಿಂದ ಫೀಡರುವಾರು ಹಾಗೂ ಪಟ್ಟಣವಾರು ಸಮಗ್ರತಾಂತ್ರಿಕ ಹಾಗೂ ವಾಣಿಜ್ಯ ನಷ್ಟ ಪ್ರಮಾಣವನ್ನುಗೊತ್ತುಪಡಿಸಿಕೊಳ್ಳಬಹುದಾಗಿದೆ.

  7. ಮಾಹಿತಿತಂತ್ರಜ್ಞಾನಅವಕಾಶಕಲ್ಪಿಸುವುದರಿಂದ ಲಭ್ಯವಾಗುವ ಫಲಿತಗಳು:
   1. ಯುಕ್ತರೀತಿಯ ವಿದ್ಯುತ್ ಲೆಕ್ಕೀಕರಣ ಹಾಗೂ ಪರಿಶೋಧನೆ.
   2. ಸಮಗ್ರತಾಂತ್ರಿಕ ಹಾಗೂ ವಾಣಿಜ್ಯ ನಷ್ಟ ಪ್ರಮಾಣದ ನಿಖರ ಲೆಕ್ಕಾಚಾರ.
   3. ಗ್ರಾಹಕರನ್ನು ಮತ್ತಷ್ಟುತೃಪ್ತರನ್ನಾಗಿಸುವುದು.
   4. ಎಲ್ಲಾ ವಿತರಣ ಪರಿವರ್ತಕ ಹಾಗೂ ಫೀಡರುಗಳಲ್ಲಿ ಸ್ವ-ದತ್ತ ಮಾಹಿತಿ.
   5. ಇಡೀ ವಿತರಣಾಕಾರ್ಯಜಾಲದ11ಕೆ.ವಿ. ಹಾಗೂಕಡಿಮೆ ವೋಲ್ಟೇಜು ಪ್ರಮಾಣದಆಸ್ತಿಗಳ ನಕ್ಷೆಯನ್ನುಸಿದ್ಧಪಡಿಸುವುದು.
   6. ಮಾಪಕ ವಾಚನ, ಬಿಲ್ ಸಿದ್ಧಪಡಿಸುವಿಕೆ ಹಾಗೂ ವಸೂಲಿಗಾಗಿ ಮಾಹಿತಿತಂತ್ರಜ್ಞಾನಅನ್ವಯಿತಗಳನ್ನುಅಳವಡಿಸಿಕೊಳ್ಳುವುದು.
  8. ಕಾರ್ಯಕ್ರಮದ ಪ್ರಸಕ್ತ ಹಂತ :
  9. ಎಸ್.ಎಲ್.ಆರ್.ಡಿ.ಸಿ.ಯಿಂದ, ರೂ.103.08ಕೋಟಿ ಮೌಲ್ಯಕ್ಕೆ(ಎಲ್ಲಾ ವಿದ್ಯುತ್ ಸರಬರಾಜುಕಂಪನಿಗಳದತ್ತ ಮಾಹಿತಿಕೇಂದ್ರ ಹಾಗೂ ವಿಪತ್ತು ನಿರ್ವಹಣೆ ಹೆಚ್ಚುವರಿ ವೆಚ್ಚವನ್ನೂಒಳಗೊಂಡು) ದಿನಾಂಕ21.02.2017ರಅನುಮೋದನೆಯನ್ನು ಪಡೆದ ನಂತರ, ಈ ಐ.ಪಿ.ಡಿ.ಎಸ್. ಕಾರ್ಯಕ್ರಮದಅಡಿಯಲ್ಲಿಒಳಪಡುವಎಲ್ಲಾ ವಿದ್ಯುತ್ ಸರಬರಾಜುಕಂಪನಿಗಳ 124 ಪಟ್ಟಣಗಳಲ್ಲಿ ಮಾಹಿತಿತಂತ್ರಜ್ಞಾನಕಾರ್ಯಕ್ರಮಕ್ಕೆಅವಕಾಶಕಲ್ಪಿಸುವು ಸಂಬಂಧವಾದ ವಿವರವಾದಕಾರ್ಯಯೋಜನಾ ವರದಿಯನ್ನು, ಕಾರ್ಯಕ್ರಮದ ಮೇಲುಸ್ತುವಾರಿ ಸಮಿತಿಗೆ ಮೆ||ವಿದ್ಯುತ್ ವಿತ್ತೀಯ ನಿಗಮದ ಮೂಲಕ ಸಲ್ಲಿಸಲಾಯಿತು. ಯೋಜನೆಯಅಂದಾಜು ವೆಚ್ಚರೂ.103.08ಕೋಟಿಗೆಎದಿರಾಗಿ, ಎಲಾ ವಿದ್ಯುತ್ ಸರಬರಾಜುಕಂಪನಿಗಳಿಗೆ ಮಂಜೂರಾಗಿರುವ ವೆಚ್ಚ ಮೊಬಲಗುರೂ.61.98ಕೋಟಿಯಾಗಿದೆ.ಪಿ.ಎಮ್.ಎ.ರಹಿತವಾಗಿ, ಬೆ.ವಿ.ಕಂಪನಿ ಹಾಗೂಇತರ ವಿದ್ಯುತ್ ಸರಬರಾಜುಕಂಪನಿಗಳು ಈ ಐ.ಪಿ.ಡಿ.ಎಸ್. ಕಾರ್ಯಕ್ರಮದಲ್ಲಿ ಮಾಹಿತಿತಂತ್ರಜ್ಞಾನಕ್ಕೆಅವಕಾಶಕಲ್ಪಿಸುವಿಕೆಯನ್ನುಅನುಷ್ಠಾನಗೊಳಿಸಲು ನಿರ್ಧರಿಸಿದ್ದು, ಬೆ.ವಿ.ಕಂಪನಿಯುಎಲ್ಲಾ ವಿದ್ಯುತ್ ಸರಬರಾಜುಕಮ್ಪನಿಗಳ ಪರವಾಗಿಐ.ಟಿ.ಐ.ಎ.ಯ ನೇಮಕಗೊಳಿಸುವ ಪ್ರಕ್ರಿಯೆಯನ್ನುಕಾರ್ಯರೂಪಗೊಳಿಸಬೇಕಿದೆ. ಐ.ಟಿ.ಐ.ಎ.ಯನ್ನು ನೇಮಕಗೊಳಿಸುವಟೆಂಡರು ಪ್ರಕಟಣೆಯನ್ನು ದಿನಾಂಕ12.03.2018ರಂದು ಪ್ರಕಟಪಡಿಸಲಾಗಿದ್ದು, 31.05.2018ರ ಹೊತ್ತಿಗೆಕಾರ್ಯಾದೇಶವನ್ನು ನೀಡಲಾಗುವುದು.