ಅನಧಿಕೃತ ಪಂಪ್ ಸೆಟ್ ಗಳ ಸಕ್ರಮಿಕರಣದ ಬಗ್ಗೆ

ಸರ್ಕಾರದ ಆದೇಶ ಸಂಖ್ಯೆ ಇಎನ್ 09 ಪಿಎಸ್ ಆರ್ 2011, ಬೆಂಗಳೂರು ದಿನಾಂಕ 11.03.2011:-

 • ಅನಧಿಕೃತ ನೀರಾವರಿ ಪಂಪುಸೆಟ್ಟುಗಳಿಂದ ವಿದ್ಯುತ್ ಪರಿವರ್ತಕಗಳ ಮೇಲೆ ಅಧಿಕ ಹೊರೆ ಉಂಟಾಗುತ್ತಿದ್ದು, ವಿದ್ಯುತ್ ಪರಿವರ್ತಕಗಳ ವಿಫಲತೆ ಹಾಗೂ ನಷ್ಠ ಹೆಚ್ಚಾಗುತ್ತಿದೆ.
 • ವಿತರಣಾ ಪರಿವರ್ತಕಗಳ ಮೇಲೆ ಅಧಿಕ ಹೊರೆ ಹಾಗೂ ನಷ್ಟವನ್ನು ಕಡಿಮೆಗೊಳಿಸಲು ಘನ ಸರ್ಕಾರವು ಅನಧಿಕೃತ ನೀರಾವರಿ ಪಂಪುಸೆಟ್ಟುಗಳ ಸಕ್ರಮೀಕರಣ ಯೋಜನೆಯನ್ನು 2005 ಮತ್ತು 2011 ರಲ್ಲಿ ಸರ್ಕಾರದ ಆದೇಶ ಸಂಖ್ಯೆ ಇಎನ್ 09 ಪಿಎಸ್ ಆರ್ 2011, ಬೆಂಗಳೂರು ದಿನಾಂಕ 11-03-2011 ರಂದು ಜಾರಿಗೆ ತರಲಾಗಿತ್ತು
 • ಸದರಿ ಆದೇಶದಲ್ಲಿ ಸರ್ಕಾರವು ದಿನಾಂಕ 31.07.2012ರವರೆಗೆ ಅರ್ಜಿ ನೋಂದಾಯಿಸಲು ಕೊನೆಯ ದಿನಾಂಕವನ್ನಾಗಿ ನಿಗಧಿಪಡಿಸಲಾಗಿತ್ತು.
 • ಅದರಂತೆ, ದಿನಾಂಕ 31.07.2012ರ ಅಂತ್ಯಕ್ಕೆ 85,241 ಅನಧಿಕೃತ ಪಂಪುಸೆಟ್ಟುಗಳ ಅರ್ಜಿಗಳನ್ನು ನೊಂದಾಯಿಸಿಕೊಳ್ಳಲಾಗಿದೆ.
 • 30.09.2014 ರ ಅಂತ್ಯಕ್ಕೆ 84,078 ಸಂಖ್ಯೆಯ ಅನಧಿಕೃತ ನೀರಾವರಿ ಪಂಪುಸೆಟ್ಟುಗಳಿಗೆ ಆರ್.ಆರ್. ಸಂಖ್ಯೆಗಳನ್ನು ನೀಡಿ, ಸಕ್ರಮೀಕರಣಗೊಳಿಸಲಾಗಿದೆ.
 • 84,078 ರ ಪೈಕಿ 44,158 ಸಂಖ್ಯೆಯ ಅರ್ಜಿದಾರರು ರೂ 10,000/- ಪಾವತಿಸಿರುತ್ತಾರೆ, 39,920 ಸಂಖ್ಯೆಯ ಅರ್ಜಿದಾರರು ರೂ 50/- ಪಾವತಿಸಿರುತ್ತಾರೆ. 44,158 ಸಂಖ್ಯೆಯ ಪೈಕಿ 21,760 ಸಂಖ್ಯಗಳಿಗೆ ಮೂಲ ಭೂತ ಸೌಕರ್ಯವನ್ನು ಒದಗಿಸಲಾಗಿದೆ.
 • ಸಕ್ರಮೀಕರಣ ಶುಲ್ಕ ರೂ. 10,000/- ಮತ್ತು ಇತರೆ ಠೇವಣಿಗಳನ್ನು ಪಾವತಿಸಿದ ಅರ್ಜಿದಾರರಿಗೆ ಜೇಷ್ಟತೆ ಆದಾರದ ಮೇಲೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗುತ್ತಿದೆ.
 • ರೂ. 50/- ಪಾವತಿಸಿ ನೋಂದಾಯಿಸಿರುವ ಅರ್ಜಿದಾರರೊಂದಿಗೆ ಈಗಾಗಲೇ ತಿಳುವಳಿಕೆ ಪತ್ರ ಹಾಗೂ ಟಾಂಟಾಂ ಮೂಲಕ ಸಕ್ರಮೀಕರಣ ಶುಲ್ಕ ರೂ. 10,000/- ಮತ್ತ ಇತರೆ ಠೇವಣಿಗಳನ್ನು ಪಾವತಿಸಿದಲ್ಲಿ ಜೇಷ್ಟತೆ ಆಧಾರದ ಮೇಲೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗುವುದೆಂದು ಪ್ರಚಾರ ನೀಡಲಾಗಿದೆ.
 • ರೂ. 10,000/- ಮತ್ತು ಇತರೆ ಠೇವಣಿಗಳನ್ನು ಪಾವತಿಸಿದ ಅರ್ಜಿದಾರರಿಗೆ ಜೇಷ್ಟತೆ ಆಧಾರದ ಮೇಲೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ವೃತ್ತ ಕಚೇರಿಗಳಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರರಿಗೆ ಕಾರ್ಯಾದೇಶವನ್ನು ನೀಡಲಾಗಿದ್ದು, ಮೂಲಭೂತ ಸೌಕರ್ಯ ಒದಗಿಸುವ ಕಾಮಗಾರಿಯು ಪ್ರಗತಿಯಲ್ಲಿರುತ್ತದೆ.
 • ರೂ. 10,000/- ಪಾವತಿಸಿ ಸಕ್ರಮೀಕರಣಗೊಂಡ ಅನಧಿಕೃತ ನೀರಾವರಿ ಪಂಪುಸೆಟ್ಟುಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಈ ಕಚೇರಿಯಿಂದ ಮಾಸಿಕವಾರು ವಿಭಾಗವಾರು ಗುರಿಯನ್ನು ಜೂನ್ 14 ರಿಂದ ಜನವರಿ 15 ರವರೆಗೆ ನಿಗಧಿಪಡಿಸಲಾಗಿದ್ದು, ಎಲ್ಲಾ ಕ್ಷೇತ್ರಾಧಿಕಾರಿಗಳಿಗೆ ಈ ಕಾರ್ಯವನ್ನು ಆದ್ಯತೆ ಮೇರೆಗೆ ಪರಿಗಣಿಸಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನವನ್ನು ನೀಡಲಾಗಿದೆ.
 • ನೀರಾವರಿ ಪಂಪುಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ
  ಕರ್ನಾಟಕ ಘನ ಸರ್ಕಾರದ ಆದೇಶ ಸಂಖ್ಯೆ ಇಎನ್ 41 ವಿಎಸ್ ಸಿ 2014 ಪಿ1 ದಿನಾಂಕ 14.07.2014
  ಕರ್ನಾಟಕ ಘನ ಸರ್ಕಾರದ ಆದೇಶ ಸಂಖ್ಯೆ ಇಎನ್ 41 ವಿಎಸ್ ಸಿ 2014 ಪಿ1 ದಿನಾಂಕ 23.07.2014
  ಕರ್ನಾಟಕ ಘನ ಸರ್ಕಾರದ ಸುತ್ತೋಲೆಯ ಪ್ರಕಾರ ನೀರಾವರಿ ಪಂಪುಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಹಾಗೂ ಮೂಲಭೂತ ಸೌಕರ್ಯ ಒದಗಿಸಲು ರೈತರಿಗೆ ಈ ಕೆಳಕಂಡಂತೆ ಅವಕಾಶ ಕಲ್ಪಿಸಲಾಗಿರುತ್ತದೆ.
 • ಮಾದರಿ-ಅ 31-07-2012ರೊಳಗೆ ರೂ 50/- ಪಾವತಿಸಿ ನೋಂದಾಯಿಸಿ ಸಕ್ರಮೀಕರಣಗೊಂಡು ರೂ 10,000/- ಮತ್ತು ಇತರೆ ಠೇವಣಿಯನ್ನು ಪಾವತಿ ಮಾಡಿದಲ್ಲಿ ಜೇಷ್ಠತೆ ಆಧಾರದ ಮೇಲೆ ಮೂಲಭೂತ ಸೌಕರ್ಯವನ್ನು ಕಲ್ಪಿಸಲಾಗುವುದು.
 • ಕೊಳವೆ ಬಾವಿ ಕೊರೆಸಿ ಅನಧಿಕೃತವಾಗಿ ವಿದ್ಯುತ್ ಜಾಲಕ್ಕೆ 31-07-2012ರ ನಂತರ ಸೇರ್ಪಟ್ಟು ಸಕ್ರಮೀಕರಣಗೊಳಿಸಲು ನೋಂದಾಯಿಸಲು ಬಯಸುವವರು ಹಾಗೂ ಹೊಸ ನೀರಾವರಿ ಪಂಪುಸೆಟ್ಟುಗಳಿಗೆ, ರೈತರು ಈ ಕೆಳಕಂಡ ಆಯ್ಕೆ ಮಾಡಬಹುದು
 • ಮಾದರಿ-ಆ ಶೀಘ್ರ ಸಂಪರ್ಕ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಬಯಸುವ ರೈತರು ಮೇಲ್ವಿಚಾರಣಾ ಶುಲ್ಕ ರಹಿತ ಸ್ವಯಂ ಕಾರ್ಯನಿರ್ವಾಹಣಾ ಯೋಜನೆಯಡಿಯಲ್ಲಿ ಮೂಲಭೂತ ಸೌಕರ್ಯ ರಚಿಸಿಕೊಂಡು ಅಗತ್ಯಕ್ಕೆ ತಕ್ಕಂತೆ ಬೆವಿಕಂನಿಂದ 25 ಕೆವಿಎ ಪರಿವರ್ತಕ ಪಡೆಯಬಹುದು.
 • ಮಾದರಿ-ಇ ಹೆಚ್.ಟಿ ಸಂಪರ್ಕ: ಹೆಚ್.ಟಿ ಮಾರ್ಗದಲ್ಲಿ ನೀರಾವರಿ ಪಂಪುಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಪಡೆಯಬಯಸುವ ರೈತರು 11 ಕೆವಿ ಹೆಚ್.ಟಿ ಮಾರ್ಗ ಮತ್ತು ಇತರೆ ಉಪಕರಣಗಳ ಮೊತ್ತದ ಶೇ. 25 ರಷ್ಟು ಭರಿಸಿ ಮಾಪಕ ಅಳವಡಿಸಿಕೊಂಡು ಕೆಇಆರ್‍ಸಿರವರು ನಿಗಧಿಗೊಳಿಸುವ ದರವನ್ನು ಪಾವತಿಸುವುದು.
 • ಮಾದರಿ-ಈ ಹೆಚ್.ವಿ.ಡಿ.ಎಸ್ ವ್ಯವಸ್ಥೆಯಲ್ಲಿ ವಿದ್ಯುತ್ ಸಂಪರ್ಕ ಪಡೆಯ ಬಯಸುವ ರೈತರು ಠೇವಣಿ ಶುಲ್ಕ ಹಾಗೂ ಪರಿವರ್ತಕದ ವೆಚ್ಚವನ್ನು ಭರಿಸಿ ಮಾಪಕ ಅಳವಡಿಸಿಕೊಂಡು ಕೆಇಆರ್‍ಸಿರವರು ನಿಗಧಿಗೊಳಿಸುವ ದರವನ್ನು ಪಾವತಿಸುವುದು.