ಗಂಗಾ ಕಲ್ಯಾಣದ ಬಗ್ಗೆ

slide3

 • ಗಂಗಾ ಕಲ್ಯಾಣ ಯೋಜನೆಯು 1983 ರಿಂದ ಪ್ರಾರಂಭವಾಗಿದೆ.
 • ಗಂಗಾ ಕಲ್ಯಾಣ ಯೋಜನೆಯ ಕರ್ನಾಟಕ ಘನ ಸರ್ಕಾರದ ಸಾಮಾಜಿಕ ಜವಾಬ್ದಾರಿಯಾಗಿದ್ದು, ಸದರಿ ಯೋಜನೆಯಡಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ರೈತರ ಕೃಷಿ ನೀರಾವರಿ ಪಂಪುಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗುವುದು.
 • ಗಂಗಾ ಕಲ್ಯಾಣ ಯೋಜನೆಯು 5 ಅಭಿವೃದ್ದಿ ನಿಗಮಗಳನ್ನು ಒಳಗೊಂಡಿದೆ.
  • ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ (ಪರಿಶಿಷ್ಟ ಜಾತಿ).
  • ಕರ್ನಾಟಕ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ (ಪರಿಶಿಷ್ಟ ಪಂಗಡ)
  • ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
  • ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ
  • ಕರ್ನಾಟಕ ವಿಶ್ವ ಕರ್ಮ ಸಮುದಾಯಗಳ ಅಭಿವೃದ್ದಿ ನಿಗಮ ನಿಯಮಿತ

 • ಈ ಯೋಜನೆಯಡಿ ಫಲಾನುಭವಿಗಳನ್ನು ಸಂಬಂಧಪಟ್ಟ ಅಭಿವೃದ್ದಿ ನಿಗಮಗಳು ಗುರುತಿಸಿ, ಜಿಲ್ಲಾ ವ್ಯವಸ್ಥಾಪಕರು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಸಹಿ ಮತ್ತು ಮೊಹರಿನೊಂದಿಗೆ ಬೆವಿಕಂನ ಉಪ ವಿಭಾಗಗಳಿಗೆ ಅರ್ಜಿಗಳನ್ನು ನೊಂದಣ ಮಾಡುತ್ತಾರೆ.
 • ಅರ್ಜಿಯನ್ನು ನೊಂದಣ ಮಾಡಿದ ಮೇಲೆ, ಬೆವಿಕಂ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ, ಅಂದಾಜುಪಟ್ಟಿಯನ್ನು ತಯಾರಿಸಿ, ವಿದ್ಯುತ್ ಸಂಪರ್ಕ ನೀಡಲು ಠೇವಣ ವಿವರಗಳನ್ನೊಳಗೊಂಡ ಮಂಜುರಾತಿ ಪತ್ರವನ್ನು ಫಲಾನುಭವಿ ಹಾಗೂ ಸಂಬಂದಪಟ್ಟ ಅಭಿವೃದ್ದಿ ನಿಗಮಗಳಿಗೆ ಸಲ್ಲಿಸುತ್ತಾರೆ.
 • ಎಲ್ಲಾ ಅಭಿವೃದ್ಧಿ ನಿಗಮದವರಿಗೂ ವೈಯಕ್ತಿಕ ಫಲಾನುಭವಿಗಳಿಗೆ ಪಾವತಿ ಮಾಡಬೇಕಾಗಿರುವ ಠೇವಣ ವಿವರಗಳನ್ನೊಳಗೊಂಡ ವಿದ್ಯುತ್ ಮಂಜೂರಾತಿ ಪತ್ರವನ್ನು ನೀಡಲಾಗುವುದು.
 • ಠೇವಣ ಗಳ ವಿವರಗಳು:

  • Registration Fee = Rs 50/-
  • Initial Security Deposit : 1 HP = Rs 1110/-
  • Meter Security Deposit= Rs 2450/-
  • Meter Box= Rs 480/-
  • Supervision Charges = Rs 150/-
 • ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮರವರು ಪ್ರತಿ ಫಲಾನುಭವಿಗಳಿಗೆ ರೂ. 50000/- ಮೊತ್ತವನ್ನು ನೀಡುತ್ತವೆ. ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಹಾಗೂ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದವರಿಗೆ ಫಲಾನುಭವಿಗಳಿಗೆ 25,000/- ಠೇವಣ ಮೊತ್ತದ ವಿವರಗಳನ್ನೊಳಗೊಂಡ ವಿದ್ಯುತ್ ಮಂಜೂರಾತಿ ಪತ್ರವನ್ನು ನೀಡಲಾಗುವುದು.
 • ಕರ್ನಾಟಕ ಘನ ಸರ್ಕಾರವು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಫಲಾನುಭವಿಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಹಣವನ್ನು ನೀಡುತ್ತದೆ.
 • ಠೇವಣ ಗಳನ್ನು ಪಾವತಿಸಿದ ನಂತರ ಕಾರ್ಯಾದೇಶ ಸಂಖ್ಯೆಯನ್ನು ನೀಡಿ. ಲೈಸೆನ್ಸ್ ಹೊಂದಿರುವ ವಿದ್ಯುತ್ ಗುತ್ತಿಗೆದಾರರ ಮೂಲಕ ಅಂದಾಜುಪಟ್ಟಿಯಲ್ಲಿರುವಂತೆ ಕಾಮಗಾರಿಯನ್ನು ಪೂರ್ಣಗೊಳಿಸಿ ವಿತರಣಾ ಕಂಪನಿಗಳ ನಿಯಮಾನುಸಾರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.
 • ಬೆವಿಕಂನಲ್ಲಿ ವಿದ್ಯುದ್ದೀಕರಣಗೊಳಿಸಲು ಯಾವುದೇ ಅಂದಾಜುಪಟ್ಟಿಯ ಮಿತಿಯಿರುವುದಿಲ್ಲ.
 • ವಿಕಂನಲ್ಲಿ ಪಾರ್ಷಿಯಲ್ ಟ್ರಂಕಿ/ಟೋಟಲ್ ಟ್ರಂಕಿ/ಗುತ್ತಿಗೆ ಆಧಾರದಲ್ಲಿ ಕಾಮಗಾರಿಗಳನ್ನು ಕೈಗೊಂಡು, ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.
 • ಮುಂದುವರೆದು ಬೆವಿಕಂ ಮತ್ತು ಎಲ್ಲ ವಿತರಣಾ ಕಂಪನಿಗಳಲ್ಲಿ ಗಂಗಾ ಕಲ್ಯಾಣ ಅರ್ಜಿಗಳನ್ನು ಆನ್‍ಲೈನ್‍ನಲ್ಲಿ ನೊಂದಣ ಮಾಡಲು ಬೆವಿಕಂ ನವೀಕೃತಗೊಂಡ ತಂತ್ರಾಂಶವನ್ನು ರೂಪಿಸಲಾಗಿದೆ.
 • ಗಂಗಾ ಕಲ್ಯಾಣ ಯೋಜನೆಯಲ್ಲಿ ಅರ್ಜಿಗಳನ್ನು ನೊಂದಣ ಮಾಡಲು ಬೆವಿಕಂ ಮತ್ತು ಅಭಿವೃದ್ದಿ ನಿಗಮಗಳಿಗೆ ತಂತ್ರಾಂಶವನ್ನು ರೂಪಿಸಿಲಾಗಿದೆ. ಅಭಿವೃದ್ಧಿ ನಿಗಮದವರು ಫಲಾನುಭವಿಗಳ ವಿವರಗಳನ್ನು ತಂತ್ರಾಂಶದಲ್ಲಿ ನೊಂದಣ ಮಾಡಿದ ನಂತರ ಹಾರ್ಡ್ ಕಾಫಿ ಪೈಲನ್ನು ಸಂಬಂಧಪಟ್ಟ ಉಪ ವಿಭಾಗಗಳಿಗೆ ಸಲ್ಲಿಸುತ್ತಾರೆ. ತದ ನಂತರ ವಿದ್ಯುತ್ ಸಂಪರ್ಕದ ಪ್ರಕ್ರಿಯೆ ಪ್ರಾರಂಭವಾಗುತ್ತದೆ.
 • ಒಂದು ಬಾರಿ ಅರ್ಜಿಯು ನೊಂದಣ ಗೊಂಡರೆ ಸುತ್ತೋಲೆ ಸಂಖ್ಯೆ ಸಿವೈಎಸ್-42 ದಿನಾಂಕ 12.06.2012 ರ ಪ್ರಕಾರ 45 ದಿನಗಳ ಒಳಗಾಗಿ ವಿದ್ಯುತ್ ಸಂಪರ್ಕ ನೀಡಲಾಗುತ್ತದೆ.
 • ಅರ್ಜಿಗಳನ್ನು ನೊಂದಣ ಮಾಡಿ ಕಡತ ಸಲ್ಲಿಸಿದ ನಂತರ ಎಸ್ಕಾಂಗಳ ಪ್ರಕ್ರಿಯೆ ನಡೆಯಲಿದೆ.
 • ಪ್ರತಿ ಮಾಹೆ ವೃತ್ತ ಕಚೇರಿಗಳಲ್ಲಿ, ಬೆವಿಕಂ ಅಧಿಕಾರಿಗಳು ಹಾಗೂ ಸಂಬಂಧಿತ ಅಭಿವೃದ್ದಿ ನಿಗಮಗಳ ಜಿಲ್ಲಾ ವ್ಯವಸ್ಥಾಪಕರೊಂದಿಗೆ ಸಮನ್ವಯ ಜಂಟಿ ಸಭೆ ನಡೆಸಿ ಅಂಕಿ ಅಂಶಗಳನ್ನು ತಾಳೆ ಮಾಡಿ ಪ್ರತಿ ಮಾಹೆಯು ಇಂಧನ ಇಲಾಖೆ, ಕವಿಪ್ರನಿನಿ ಹಾಗೂ ಘನ ಸರ್ಕಾರ ನಿಯೋಜಿಸುವ ಎಲ್ಲಾ ಸಭೆಗೆ ಕಳುಹಿಸಲಾಗುತ್ತಿದೆ. ಜಂಟಿ ಸಹಿಯ ಅಂಕಿ ಅಂಶಗಳನ್ನಾಧಾರಿಸಿ ಪ್ರತಿ ಮಾಹೆ ನಿಗಮ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ

 • ಕಳೆದ 7 ವರ್ಷಗಳಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ವಿವರಗಳು ಕೆಳಕಂಡಂತಿವೆ:
ಯೋಜನೆ 2011-12 2012-13 2013-14 2014-15 2015-16 2016-17 2017-18
ಗಂಗಾಕಲ್ಯಾಣ ಯೋಜನೆ 2867 5694 4511 2560 2567 5162 7087
 • ಕರ್ನಾಟಕ ಘನ ಸರ್ಕಾರವು ರೈತರಿಗೆ ಮಳೆಕೊರತೆಯಿಂದ ತೊಂದರೆಯಾಗದಂತೆ, ಗಂಗಾ ಕಲ್ಯಾಣ ಯೋಜನೆಯಡಿ ಕೊಳವೆಬಾವಿಗಳನ್ನು ಕೊರೆಸಲಾಗುತ್ತದೆ.