ಪರಿವರ್ತಕಗಳು

  ಹಾಲಿ ಇರುವ ಪರಿವರ್ತಕಗಳು

 • ಬೆವಿಕಂನಲ್ಲಿಇಲ್ಲಿಯವರೆಗೂಅಂದರೆ (15.11.2014 ವರೆಗೆ) 205094 ಸಂಖ್ಯೆಯ ವಿವಿಧ ಸಾಮಥ್ರ್ಯದ ಪರಿವರ್ತಕಗಳು ಇದ್ದು, ಪ್ರತಿ ತಿಂಗಳಿಗೆ ಅಂದಾಜು 1500 ರಷ್ಟು ವಿವಿಧ ಸಾಮಥ್ರ್ಯದ ಪರಿವರ್ತಕಗಳು ಸೇರಿಸಲಾಗುತ್ತಿದ್ದುಕುಡಿಯುವ ನೀರು ಸರಬರಾಜು, ಗಂಗಾ ಕಲ್ಯಾಣ ಮತ್ತು ಹೊಸ ವಿದ್ಯುತ್ ಸಂಪರ್ಕಗಳು ಹಾಗೂ ಹೊರೆ ಹೆಚ್ಚಾಗಿರುವ ಸ್ಥಳಗಳಿಗೆ ಹೆಚ್ಚುವರಿ ಪರಿವರ್ತಕಗಳನ್ನು ಅಳವಡಿಸಿ ಗ್ರಾಹಕರಿಗೆಉತ್ತಮಗುಣಮಟ್ಟದ ವಿದ್ಯುತ್ ಪೂರೈಸಲುಕ್ರಮ ಕೈಗೊಳ್ಳಲಾಗುತ್ತಿದೆ
 • ಪರಿವರ್ತಕಗಳ ದಾಸ್ತಾನು

 • ಬೆವಿಕಂನಲ್ಲಿ ವಿಫಲವಾದ ಪರಿವರ್ತಕಗಳನ್ನು ಕೆ.ಇ.ಆರ್.ಸಿ ನಿಯಮಾನುಸಾರಗ್ರಾಮೀಣ ಪ್ರದೇಶಗಳಲ್ಲಿ 72 ಗಂಟೆಯ ಒಳಗೆ ಮತ್ತು ನಗರ ಪ್ರದೇಶಗಳಲ್ಲಿ 24 ಗಂಟೆಗಳ ಒಳಗಾಗಿ ಬದಲಾಯಿಸಲು ಉಪವಿಭಾಗ/ತಾಲ್ಲೂಕು ಮಟ್ಟದಲ್ಲಿ 46 ಪರಿವರ್ತಕದ ಬ್ಯಾಂಕನ್ನು ಸ್ಧಾಪಿಸಲಾಗಿದ್ದುಇದಲ್ಲದೆ ವಿಭಾಗ ಮಟ್ಟದಲ್ಲಿರುವ 28 ಸಂಖ್ಯೆಗಳ ಉಗ್ರಾಣಗಳಲ್ಲಿ ವಿಫಲವಾದ ಪರಿವರ್ತಕಗಳನ್ನು ಕೂಡಲೇ ಬದಲಾಯಿಸಲುಅವಶ್ಯವಾದ ಪರಿವರ್ತಕಗಳ ದಾಸ್ತಾನುಇರಿಸಲಾಗಿದೆ. ಇದಲ್ಲದೆ ಬೆವಿಕಂ ಹೊಸ ಪರಿವರ್ತಕಗಳ ಖರೀದಿಗೆಕ್ರಮಕೈಗೊಂಡುರೈತರಿಗೆತೊಂದರೆಯಾಗದಂತೆ ಪರಿವರ್ತಕಗಳನ್ನು ನೀಡಿಕೊರತೆಯನ್ನು ನೀವಾರಿಸಲಾಗುತ್ತಿದೆ
 • ಪರಿವರ್ತಕಗಳ ರಿಪೇರಿಕೇಂದ್ರ

 • ಬೆವಿಕಂನಲ್ಲಿ ವಿಫಲವಾದ ಪರಿವರ್ತಕಗಳನ್ನು ದುರಸ್ಥಿಗೊಳಿಸಲು 49 ಸಂಖ್ಯೆಯ ಮೈನರ್ ದುರಸ್ಥಿ ಕೇಂದ್ರಗಳು, 17 ಮೇಜರ್ ದುರಸ್ಥಿ ಕೇಂದ್ರಗಳು ಮತ್ತು ಒಂದು ಬೃಹತ್ ದುರಸ್ಥಿ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಪರಿವರ್ತಕಗಳನ್ನು ಸಕಾಲದಲ್ಲಿ ದುರಸ್ಥಿಗೊಳಿಸಿ ಸಾಕಷ್ಟು ಪರಿವರ್ತಕಗಳ ದಾಸ್ತಾನುಇರಿಸಲಾಗುತ್ತಿದೆ.ಇದಲ್ಲದೆ, ಸಿರಾ ತಾಲ್ಲೂಕಿನಲ್ಲಿ ಮೇಜರ್ ದುರಸ್ಥಿ ಕೇಂದ್ರವನ್ನು ಶೀಘ್ರದಲ್ಲೇ ಸ್ಥಾಪಿಸಿ ಕಾರ್ಯೋನ್ಮುಕಗೊಳಿಸಲಾಗುತ್ತದೆ

  ಇದಲ್ಲದೇ ವಿಫಲವಾಗಿರುವ ಪರಿವರ್ತಕಗಳನ್ನು ಎಲ್ಲಾ ವಿಭಾಗೀಯ ಮೇಜರ್ ಪರಿವರ್ತಕ ದುರಸ್ಥಿ ಕೇಂದ್ರಗಳಲ್ಲಿ ಸಿ.ಸಿ ಕ್ಯಾಮರಗಳನ್ನು ಅಳವಡಿಸಿ ಕಾರ್ಯ ನಿರ್ವಾಹಣೆಯನ್ನು ಪರಿಶೀಲಿಸಲಾಗುತ್ತಿದೆ

  ಮೇಜರ್ ದುರಸ್ಥಿ ಕೇಂದ್ರಕ್ಕೆ ಬಂದಂತಹ, ಹಾಲಿ ಇದ್ದ ಹಾಗೂ ಸುಟ್ಟಎಲ್ಲಾ ವೈಂಡಿಂಗ್ ಮತ್ತು ಬುಷಿಂಗ್‍ಗಳನ್ನು ತೆಗೆದು ಹೊಸ ವೈಂಡಿಂಗ್ ಮತ್ತು ಬುಷಿಂಗ್‍ಗಳನ್ನು ಅಳವಡಿಸಲಾಗುತ್ತಿದೆ. ಪರಿವರ್ತಕಕ್ಕೆ ಬೇಕಾಗುವ ಟ್ರಾನ್ಸ್‍ಫಾರ್ಮರ್‍ನಎಣ್ಣೆಯನ್ನು ಬೆಸ್ಕಾಂ ವತಿಯಿಂದಲೇ ನೀಡಿ ಪರಿವರ್ತಕಗಳನ್ನು ದುರಸ್ತಿಗೊಳಿಸಲಾಗುತ್ತಿದೆ

  ಪರಿವರ್ತಕ ದುರಸ್ಥಿಯ ಗುಣಮಟ್ಟವನ್ನು ಬೆವಿಕಂನ ಮೀಟರ್ ಮತ್ತು ಟೆಸ್ಟಿಂಗ್ ವಿಭಾಗದಿಂದ ಪರೀಕ್ಷೆಗೆ ಅಳವಡಿಸಿ ಪರಿಕ್ಷೆಯಲ್ಲಿಗುಣಮಟ್ಟ ಹೊಂದಿದ ಪರಿವರ್ತಕಗಳನ್ನು ಕ್ಷೇತ್ರಕ್ಕೆ ಕಳುಹಿಸಿ, ಗ್ರಾಹಕರಿಗೆ ವಿದ್ಯುತ್ ಪೂರೈಸಲಾಗುತ್ತಿದೆ