ವೆಚ್ಚಗಳು | BESCOM

BESCOM : Bangalore Electricity Supply Company Limited

ಎಸ್ಎಂಎಸ್ : 58888
ಸಹಾಯವಾಣಿ : 1912
9449844640

ವೆಚ್ಚಗಳು

ಪ್ರಧಾನ ವ್ಯವಸ್ಥಾಪಕರು(ವೆಚ್ಚಗಳು)ಶಾಖೆ

ನಗದು ನಿರ್ವಹಣೆ ಘಟಕ:

ದೈನಂದಿಕ ನಗದು ವ್ಯವಹರಣೆ ವರದಿಯನ್ನು ಸಿದ್ಧಪಡಿಸುವುದು:

ಈ ಶಾಖೆಯು, ಇತರ ಸ್ಥಳೀಯ ಬ್ಯಾಂಕುಗಳಿಂದ ಪಡೆದ ಹಣ ವ್ಯವಹರಣೆಗಳನ್ನು ಕ್ರೋಢೀಕರಿಸಲು ಕೆಳಕಂಡ ಬ್ಯಾಂಕುಗಳೊಡನೆ ಕಂಪನಿ ಕಾರ್ಯಾಲಯದ ಚಾಲ್ತಿ ಖಾತೆಯನ್ನು ಹೊಂದಿದೆ.

ಕ್ರಮ.ಸಂಖ್ಯೆ

ಬ್ಯಾಂಕಿನ ಹೆಸರು

ಬ್ಯಾಂಕಿನ ವಿಳಾಸ

1

ಕೆನರಾ ಬ್ಯಾಂಕ್ ಟೌನ್ ಹಾಲ್ ಶಾಖೆ, ಬೆಂಗಳೂರು.

2

ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಸಿ.ಬಿ.ಎ.ಬಿ. ಸಂಕೀರ್ಣ, ಕಾವೇರಿ ಭವನ, ಬೆಂಗಳೂರು.

3

ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಸಿ ಏ ಬ್ರಾಂಚ್ , ಎಂ ಜಿ ರೋಡ್ , ಬೆಂಗಳೂರು.

4

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾವೇರಿ ಭವನ ಶಾಖೆ, ಕಾವೇರಿ ಭವನ, ಬೆಂಗಳೂರು

5

ಸಿಂಡಿಕೇಟ್ ಬ್ಯಾಂಕ್ ಗಾಂಧಿನಗರ ಶಾಖೆ, ಬೆಂಗಳೂರು.

6

ಬ್ಯಾಂಕ್ ಆಫ್ ಬರೋಡಾ ಬೆಂಗಳೂರು ಕೇಂದ್ರ ಶಾಖೆ, ಕೆ.ಜಿ.ರಸ್ತೆ, ಬೆಂಗಳೂರು.

7

ವಿಜಯಾ ಬ್ಯಾಂಕ್ ಕೆ.ಜಿ.ರಸ್ತೆ ಶಾಖೆ, ಬೆಂಗಳೂರು.

8

ಐ.ಸಿ.ಐ.ಸಿ. ಬ್ಯಾಂಕ್ ಕಮಿಷರಿಯೇಟ್ ರಸ್ತೆ, ಬೆಂಗಳೂರು.

ಈ ಬ್ಯಾಂಕುಗಳೊಂದಿಗೆ ವ್ಯವಹರಿಸಿದ ಚಟುವಟಿಕೆಗಳ ವಿವರಗಳನ್ನು ದೈನಂದಿಕವಾಗಿ ಅಂತರ್ಜಾಲದ ಮೂಲಕ ಪಡೆದುಕೊಳ್ಳಲಾಗುತ್ತದೆ. ಹೀಗೆ ಅಂತರ್ಜಾಲದ ಮೂಲಕ ಪಡೆದುಕೊಳ್ಳಲಾದ ವಿವರಗಳನ್ನು ಆಧರಿಸಿ, ಆಯಾ ಬ್ಯಾಂಕುಗಳಿಂದ ಪಡೆದ ಹಣದ ಮೊತ್ತವನ್ನು ಲೆಕ್ಕಕ್ಕೆ ತೆಗೆದುಕೊಂಡು, ಆ ದಿನಕ್ಕೆ ಪಡೆದ ಒಟ್ಟು ಹಣದ ಮೊತ್ತವನ್ನು ಗೊತ್ತುಪಡಿಸಿಕೊಳ್ಳಲಾಗುತ್ತದೆ. ಈ ಒಟ್ಟು ಮೊತ್ತದ ನಿಧಿಯ ಲಭ್ಯತೆಯನ್ನು ಪರಿಗಣಿಸಿ, ಕೆಪೆಕ್ಸ್, ವಿದ್ಯುತ್ ಖರೀದಿ, ಸಿಬ್ಬಂದಿ ವೆಚ್ಚ, ಆಡಳಿತ ಮತ್ತು ಸಾಮಾನ್ಯ ವೆಚ್ಚಗಳು, ದುರಸ್ತಿ ಮತ್ತು ನಿರ್ವಹಣೆ, ಸಾಲ ತೀರಿಸುವಿಕೆ, ಇಂತಹ ವೆಚ್ಚಗಳಿಗೆ ನಿಗಮದ ವಿವಿಧ ಕಚೇರಿಗಳು ಮಂಡಿಸುವ ನಿಧಿ ಕೋರಿಕೆಯನ್ನು ಪರಿಶೀಲಿಸಿ ನಿಧಿ ವರ್ಗಾವಣೆ ಮಾಡಲಾಗುವುದು. ಬ್ಯಾಂಕಿನ ಲೆಕ್ಕದಲ್ಲಿ ಲಭ್ಯವಿರುವ ನಿಧಿಯಲ್ಲಿ, ವಿವಿಧ ಕಚೇರಿಗಳಿಗೆ ವರ್ಗಾಯಿಸಲ್ಪಟ್ಟ ನಿಧಿಯನ್ನು ಕಳೆದು ಬ್ಯಾಂಕಿನ ಲೆಕ್ಕ ಖಾತೆಯಲ್ಲಿ ಉಳಿಯುವ ಮೊಬಲಗನ್ನು ಗೊತ್ತುಪಡಿಸಿಕೊಳ್ಳಲಾಗುತ್ತದೆ. ಅಂತಿಮವಾಗಿ, ದೈನಂದಿಕವಾಗಿ, ಪ್ರತಿ ಬ್ಯಾಂಕಿನ ಲೆಕ್ಕ ಖಾತೆಯಲ್ಲಿರುವ ಉಳಿಕೆ ಶಿಲ್ಕು ಮೊಬಲಗನ್ನು ಕಚೇರಿಯ ಹಣ ಚಲಾವಣೆ ವ್ಯವಹರಣೆಯೊಂದಿಗೆ ತಾಳೆ ಮಾಡಲಾಗುವುದು. ಸರಾಸರಿ ಮಾಸಿಕ ಸ್ವೀಕೃತಿ 800 ರಿಂದ 850 ಕೋಟಿ ರೂ.ಗಳಿದ್ದು, ವೆಚ್ಚಗಳಿಗಾಗಿ ಹಂಚಲ್ಪಡುವ ಮೊಬಲಗು ೮೫೦ರಿಂದ 1000 ಕೋಟಿ ರೂ.ಗಳಾಗುತ್ತದೆ.

ಕೇಂದ್ರ ಕಚೇರಿಯಿಂದ ವರ್ಗಾವಣೆ ಮಾಡಲ್ಪಟ್ಟ ಮೊಬಲಗಿನ ಲೆಕ್ಕ ಹೊಂದಾಣಿಕೆ:

ಕಂಪೆನಿಯ ಲೆಕ್ಕ ಘಟಕ ಕಚೇರಿಗಳ ಬ್ಯಾಂಕ್ (ಹಣ ಪಡೆಯುವ ಸೌಲಭ್ಯದ) ಲೆಕ್ಕ ಖಾತೆಗೆ ನಿಧಿ ವಿನಿಯೋಗ/ವರ್ಗಾವಣೆ ಮಾಡಲ್ಪಟ್ಟ ಮೊಬಲಗನ್ನು ಕೇಂದ್ರ ಕಚೇರಿಯಿಂದ ವರ್ಗಾವಣೆ ಮಾಡಲ್ಪಟ್ಟ ಮೊಬಲಗು ಎಂದು ಲೆಕ್ಕೀಕರಿಸಲಾಗುತ್ತದೆ. ಎಲ್ಲಾ ಲೆಕ್ಕ ಘಟಕಗಳು, ತಮ್ಮ ಬ್ಯಾಂಕ್ (ಹಣ ಪಡೆಯುವ ಸೌಲಭ್ಯದ) ಲೆಕ್ಕ ಖಾತೆಗೆ ಸಂಬಂಧಿಸಿದ ಮಾಸಿಕ ಬ್ಯಾಂಕ್ ಲೆಕ್ಕ ಸಮನ್ವಯ ಹೊಂದಾಣಿಕೆ ನಿರೂಪಣಾ ವರದಿಯನ್ನು ಸಲ್ಲಿಸತಕ್ಕದ್ದು. ಮಾಸಿಕ ಬ್ಯಾಂಕ್ ಲೆಕ್ಕ ಸಮನ್ವಯ ಹೊಂದಾಣಿಕೆ ನಿರೂಪಣಾ ವರದಿಯನ್ನು ಸ್ವೀಕರಿಸಿದ ನಂತರ, ಕೇಂದ್ರ ಕಚೇರಿಯಿಂದ ವರ್ಗಾವಣೆ ಮಾಡಲ್ಪಟ್ಟ ನಿಧಿಯ ಲೆಕ್ಕ ಸಮನ್ವಯ ಹೊಂದಾಣಿಕೆಯ ಪರಿಶೀಲನೆ ಮಾಡಲಾಗುವುದು. ಆದಾಗ್ಯೂ, ಮಾರ್ಚ್ ಅಂತಿಮ ಲೆಕ್ಕಗಳನ್ನು ಇತ್ಯರ್ಥಗೊಳಿಸುವ ಸಮಯದಲ್ಲಿ, ಆಯಾ ಲೆಕ್ಕ ಘಟಕದ ಬ್ಯಾಂಕ್ ಖಾತೆಗೆ ಕೇಂದ್ರ ಕಚೇರಿಯಿಂದ ವರ್ಗಾವಣೆ ಮಾಡಲ್ಪಟ್ಟ ಮೊಬಲಗು ಹಾಗೂ ಸಂಬಂಧಿತ ಲೆಕ್ಕ ಘಟಕದ ಬ್ಯಾಂಕ್ ಖಾತೆಯಲ್ಲಿ ಸ್ವೀಕರಿಸಿ ಲೆಕ್ಕಕ್ಕೆ ತೆಗೆದುಕೊಂಡ ಮೊಬಲಗಿನ ತಾಳೆ ಮಾಡಿ, ದೃಢೀಕರಣ ನೀಡಲಾಗುತ್ತದೆ.

ಕವಿಪ್ರನಿನಿ ಹಾಗೂ ವಿ.ಸ.ಕಂಪನಿಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗೆ ವಂತಿಗೆ:

ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ, ಎರಡನೆಯ ವರ್ಗಾವಣೆ ಯೋಜನೆಯ ಅಡಿಯಲ್ಲಿ ಕವಿಪ್ರನಿನಿಯಿಂದ ವಿದ್ಯುತ್ ಸರಬರಾಜು ಕಂಪನಿಗಳಿಗೆ ವರ್ಗಾವಣೆ ಹೊಂದಿದ ಉದ್ಯೋಗಿಗಳ ಸೇವಾಂತ್ಯ ಸೌಲಭ್ಯಗಳ ನಿಮಿತ್ತ ದಿನಾಂಕ ೦೧.೦೬.೨೦೦೨ರಿಂದ ಕವಿಪ್ರನಿನಿ ಹಾಗೂ ವಿ.ಸ.ಕಂಪನಿಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗೆ ವಂತಿಗೆಯನ್ನು ಸಂದಾಯ ಮಾಡತಕ್ಕದ್ದು. ೦೧.೦೬.೨೦೦೨ರಿಂದ ಕಾಲಕಾಲಕ್ಕೆ ಸಂದಾಯ ಮಾಡಲ್ಪಟ್ಟ ವಂತಿಗೆಯ ವಿವರ ಹೀಗಿದೆ:

ಕ್ರಮ ಸಂಖ್ಯೆ

ಯಾವ ಅವಧಿಗೆ

ಮೂಲ ವೇತನ + ತುಟ್ಟಿಭತ್ಯೆಗೆ % ಪಿಂಚಣಿ

ಮೂಲ ವೇತನಕ್ಕೆ ಉಪದಾನ

1

01.6.2002

31.3.2004

15.05

1.86

2

01.4.2004

31.3.2005

19.06

2.36

3

01.4.2005

31.3.2008

21.00

1.77

4

01.4.2008

31.3.2010

26.13

2.24

5

01.4.2010

31.03.2011

29.11

3.34

6

01.04.2011

30.00

6.01

ಬೆವಿಕಂಪನಿಯು, ಮಾಸಿಕ ಪಿಂಚಣಿ ಹಾಗೂ ಉಪದಾನ ವಂತಿಗೆಯನ್ನು ತಾತ್ಕಾಲಿಕವಾಗಿ ಸಂದಾಯ ಮಾಡುತ್ತಿದ್ದು, ಈ ಸಂದಾಯವು ಮಾರ್ಚ್ (ಅಂತಿಮ)ಲೆಕ್ಕಗಳ ಇತ್ಯರ್ಥಪಡಿಸುವಿಕೆಯ ಸಮಯದಲ್ಲಿ ಗೊತ್ತುಪಡಿಸುವ ವಾಸ್ತವಿಕ ವಂತಿಗೆಯ ಮೊಬಲಗಿನ ಹೊಂದಾಣಿಕೆಗೆ ಒಳಪಟ್ಟಿದೆ.

ಕವಿಪ್ರನಿನಿ ಹಾಗೂ ವಿ.ಸ.ಕಂಪನಿಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್ ಪರವಾಗಿ ಬೆವಿಕಂಪನಿ ಸಿಬ್ಬಂದಿಗೆ ಸೇವಾಂತ್ಯ ಸೌಲಭ್ಯಗಳ ನೀಡಿಕೆ:

ಬೆವಿಕಂಪನಿಯಲ್ಲಿ ನಿವೃತ್ತರಾದ/ಸೇವೆಯಲ್ಲಿರುವಾಗ ಮರಣ ಹೊಂದಿದ ಸಿಬ್ಬಂದಿಗೆ, ಬೆವಿಕಂಪನಿಯು ಕವಿಪ್ರನಿನಿ ಹಾಗೂ ವಿ.ಸ.ಕಂಪನಿಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್ ಪರವಾಗಿ ಆಯಾ ಸಿಬ್ಬಂದಿಯು ಕಾರ್ಯನಿರ್ವಹಿಸುತ್ತಿದ್ದ ಲೆಕ್ಕ ಘಟಕ ಕಚೇರಿಯ ಮೂಲಕ ಆದ್ಯವಾಗಿ ಸೇವಾಂತ್ಯ ಸೌಲಭ್ಯದ ಮೊಬಲಗನ್ನು ನೀಡುತ್ತಿದೆ. ಒಂದು ತಿಂಗಳು ಕಳೆದ ನಂತರ, ಮರಣ ಹಾಗೂ ನಿವೃತ್ತಿ ಉಪದಾನ ಹಾಗೂ ಪಿಂಚಣಿ ಪರಿವರ್ತನೆ ವಿವರಗಳ ಸಹಿತ ಹಿಂಪಾವತಿಗಾಗಿ ಕವಿಪ್ರನಿನಿ ಹಾಗೂ ವಿ.ಸ.ಕಂಪನಿಗಳ ಪಿಂಚಣಿ ಮತ್ತು ಉಪದಾನ ಟ್ರಸ್ಟ್‌ಗೆ ಕೋರಿಕೆಯನ್ನು ಸಲ್ಲಿಸಲಾಗುತ್ತದೆ. ಸ್ವೀಕರಿಸಿದ ಕೋರಿಕೆಯನ್ನು ಆಧರಿಸಿ ಟ್ರಸ್ಟ್ ಬೆವಿಕಂಪನಿಗೆ ಮೊಬಲಗನ್ನು ಪಾವತಿಸುತ್ತಿದೆ. ಮಾರ್ಚ್ (ಅಂತಿಮ) ಲೆಕ್ಕಗಳ ಸಮಯದಲ್ಲಿ, ಎಲ್ಲಾ ಲೆಕ್ಕ ಘಟಕಗಳು ತಮ್ಮ ತಮ್ಮ ಘಟಕದ ಮೊಬಲಗನ್ನು ಕಂಪನಿ ಕಾರ್ಯಾಲಯದ ಮೊಬಲಗಿನೊಂದಿಗೆ ಪರಿಶೀಲಿಸಿ ಸಮನ್ವಯಗೊಳಿಸಿಕೊಳ್ಳತಕ್ಕದ್ದು.

ಖಾತೆ ಕೊರತೆ ಮೊತ್ತ(OVERDRAFT):

ಬೆವಿಕಂಪೆನಿಯು, ತನ್ನ ಕಾರ್ಯಶೀಲ ಬಂಡವಾಳದ ನಿಮಿತ್ತ ಕೆಳಕಂಡ ಬ್ಯಾಂಕುಗಳಿಂದ ಖಾತೆಯಲ್ಲಿ ಕೊರತೆ ಕಂಡುಬಂದ ಮೊಬಲಗಿನ ಸೌಲಭ್ಯವನ್ನು ಪಡೆದುಕೊಂಡಿದೆ.

ಕ್ರಮ ಸಂಖ್ಯೆ

ಬ್ಯಾಂಕಿನ ಹೆಸರು

ಮಿತಿ ( ರೂ.ಕೋಟಿಗಳಲ್ಲಿ)

1.

ವಿಜಯಾ ಬ್ಯಾಂಕ್

300

2

ಕೆನರಾ ಬ್ಯಾಂಕ್

500

3

ಬ್ಯಾಂಕ್ ಆಫ್ ಬರೋಡಾ

150

4

ಬ್ಯಾಂಕ್ ಆಫ್ ಇಂಡಿಯಾ

100

5

ಸಿಂಡಿಕೇಟ್ ಬ್ಯಾಂಕ್

100

6

ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್

100

ವಿಶ್ವಾಸಾರ್ಹತೆ ಪತ್ರ(LETTER OF CREDIT):

ವಿದ್ಯುತ್ ಮಾರಾಟಗಾರರು/ಪ್ರಸರಣ ಸಂಸ್ಥೆಯ ಪರವಾಗಿ ಬೆವಿಕಂಪನಿಯು ಬ್ಯಾಂಕ್ ಆಫ್ ಇಂಡಿಯಾ, ಬೆಂಗಳೂರು ಕೇಂದ್ರ ಶಾಖೆ, ಕೆ.ಜಿ.ರಸ್ತೆ, ಬೆಂಗಳೂರು ಇಲ್ಲಿ ರೂ.೨೮೭.೩೭ ಕೋಟಿಗೆ ವಿಶ್ವಾಸಾರ್ಹತೆ ಪತ್ರ(ಖಾತರಿ ಪತ್ರ)ದ ಖಾತೆಯನ್ನು ಹೊಂದಿದೆ.

ಭರವಸೆ ಖಾತೆ(ESCROW ACCOUNT):

ಬೆವಿಕಂಪೆನಿಯು, ಕವಿಪ್ರನಿನಿಗೆ ಪಾವತಿಸಬೇಕಾದ ಪ್ರಸರಣ ಶುಲ್ಕ ರೂ.೭೦.೮೬ಕೋಟಿಯ ನಿಮಿತ್ತ ಎಚ್.ಡಿ.ಎಫ್.ಸಿ.ಬ್ಯಾಂಕ್, ರಿಚ್‌ಮಂಡ್ ರಸ್ತೆ ಶಾಖೆ, ಬೆಂಗಳೂರು ಇಲ್ಲಿ ಭರವಸೆ ಖಾತೆಯನ್ನು ಹೊಂದಿದೆ.

ಸಾಲ ಮತ್ತು ಬಜೆಟ್ ಶಾಖೆ:

ವಾಯಿದೆ ಸಾಲ: ಬಂಡವಾಳ ವೆಚ್ಚಗಳ ಪ್ರಯುಕ್ತ ಬೆವಿಕಂಪನಿಯು ಕೆಳಕಂಡ ಆರ್ಥಿಕ ಸಂಸ್ಥೆಗಳಿಂದ ವಾಯಿದೆ ಸಾಲದ ಸೌಲಭ್ಯವನ್ನು ಪಡೆದುಕೊಂಡಿದೆ.

ದೀರ್ಘಾವಧಿ ಸಾಲದ ಉಳಿಕೆ ಶಿಲ್ಕು ರೂ.ಕೋಟಿಗಳಲ್ಲಿ
ಕ್ರಮ ಸಂಖ್ಯೆ ವಿವರ 31.03.2012ರಂದಿಗೆ ಇರುವ ಸಾಲದ ಮೊತ್ತ 31.03.2013ರಂದಿಗೆ ಇರುವ ಸಾಲದ ಮೊತ್ತ 31.03.2014ರಂದಿಗೆ ಇರುವ ಸಾಲದ ಮೊತ್ತ
1 ಕರ್ನಾಟಕ ಸರ್ಕಾರದಿಂದ-ಪಿ.ಎಂ.ಜಿ.ವೈ.ಪ್ರಯುಕ್ತ 1.10 0.99 0.99
2 ಕರ್ನಾಟಕ ಸರ್ಕಾರದಿಂದ-ತ್ವ.ವಿ.ಅ.ಸು.ಯೋ (ಎ.ಪಿ.ಡಿ.ಆರ್.ಪಿ.) ಪ್ರಯುಕ್ತ 45.88 41.71 41.71
3 ಕರ್ನಾಟಕ ಸರ್ಕಾರದಿಂದ-ಬಡ್ಡಿ ರಹಿತ-ಅಧಿಕ ದರದ ವಿದ್ಯುತ್ ಖರೀದಿ 0.94 0.94 0.94
4 ಕರ್ನಾಟಕ ಸರ್ಕಾರದಿಂದ-ಗಂಗಾ ಕಲ್ಯಾಣ 2.16 1.62 1.62
5 ಕರ್ನಾಟಕ ಸರ್ಕಾರದಿಂದ- ವಿದ್ಯುತ್ ಕ್ಷೇತ್ರ ಸ್ವಕಾರ್ಯಾಚರಣೆ 0.88 0.73 0.73
6 ಪಿ.ಎಫ್.ಸಿ. ಇಂದ ಸಾಲ-ಕವಿಪ್ರನಿನಿ 1.11 0.00 153.91
7 ಪಿ.ಎಫ್.ಸಿ. ಇಂದ ಸಾಲ-ಡ್ರಮ್ 12.32 10.27 8.20
8 ಪಿ.ಎಫ್.ಸಿ. ಇಂದ ಸಾಲ- ಪು.ತ್ವ.ವಿ.ಅ.ಸು.ಯೋ

(ಆರ್.ಎ.ಪಿ.ಡಿ.ಆರ್.ಪಿ.)_ಭಾಗ ಎ ಪ್ರಯುಕ್ತ

78.41 78.41 146.65
9 ಪಿ.ಎಫ್.ಸಿ. ಇಂದ ಸಾಲ- ಪು.ತ್ವ.ವಿ.ಅ.ಸು.ಯೋ

(ಆರ್.ಎ.ಪಿ.ಡಿ.ಆರ್.ಪಿ.)_ಭಾಗ ಬಿ ಪ್ರಯುಕ್ತ

43.54 43.54 43.54
10 ಆರ್.ಇ.ಸಿ ಇಂದ ಸಾಲ- ಕವಿಪ್ರನಿನಿ 94.56 75.65 56.74
11 ಆರ್.ಇ.ಸಿ ಇಂದ ಸಾಲ- ತ್ವ.ವಿ.ಅ.ಸು.ಯೋ 6.16 5.41 4.66
12 ಆರ್.ಇ.ಸಿ ಇಂದ ಸಾಲ- ರಾ.ಗಾಂ.ಗ್ರಾ.ವಿ.ಯೋ. 15.59 13.94 12.29
13 ಭಾರತೀಯ ಸ್ಟೇಟ್ ಬ್ಯಾಂಕ್‌ನಿಂದ ಸಾಲ 21.46 7.18 0
14 ಕಾರ್ಪೊರೇಷನ್ ಬ್ಯಾಂಕ್‌ನಿಂದ ಸಾಲ 0.00 0.00 284.34
15 ಬ್ಯಾಂಕ್ ಆಫ್ ಇಂಡಿಯಾದಿಂದ ಸಾಲ 200 200 171.40
16 ಕೆನರಾ ಬ್ಯಾಂಕ್‌ನಿಂದ ಸಾಲ 400 400 740.00
 17 Bank of maharastra 125.00 400
18 ಜೆ.ಬಿ.ಐ.ಸಿ 104.68 182.37 221.34
ಒಟ್ಟು 992.03 1187.76 2289.06

ಅಲ್ಪಾವಧಿ ಸಾಲ:

ಕಾರ್ಯಶೀಲ ಬಂಡವಾಳ ವೆಚ್ಚದ ಪ್ರಯುಕ್ತ ಬೆವಿಕಂಪನಿಯು ಕೆಳಕಂಡ ಬ್ಯಾಂಕುಗಳಿಂದ ಅಲ್ಪಾವಧಿ ಸಾಲದ ಸೌಲಭ್ಯವನ್ನು ಪಡೆದುಕೊಂಡಿದೆ.

ಅಲ್ಪಾವಧಿ ಸಾಲದ ಉಳಿಕೆ ಶಿಲ್ಕು ರೂ.ಕೋಟಿಗಳಲ್ಲಿ
ಕ್ರಮ ಸಂಖ್ಯೆ ವಿವರ 31.03.2012ರಂದಿಗೆ ಇರುವ ಸಾಲದ ಮೊತ್ತ 31.03.2013ರಂದಿಗೆ ಇರುವ ಸಾಲದ ಮೊತ್ತ 31.03.2014ರಂದಿಗೆ ಇರುವಸಾಲದಮೊತ್ತ
1 ಸೌತ್ ಇಂಡಿಯನ್ ಬ್ಯಾಂಕ್ 150 200 200
2 ವಿಜಯಾ ಬ್ಯಾಂಕ್ 350 350 150
3 ಕಾರ್ಪೊರೇಷನ್ ಬ್ಯಾಂಕ್ 200 200 125
4 ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ 250 100
5 ಬ್ಯಾಂಕ್ ಆಫ್ ಮಹಾರಾಷ್ಟ್ರ 75 0.00
6 ಆರ್.ಇ.ಸಿ ಇಂದ ಸಾಲ 300 50
7 ಪಿ.ಎಫ್.ಸಿ. ಇಂದ ಸಾಲ 181.28
8 ಸಿಂಡಿಕೇಟ್ ಬ್ಯಾಂಕ್ 250
ಒಟ್ಟು 700 1375 1056.28

ಸಾಲ ತೀರಿಸುವಿಕೆಗಾಗಿ ಗಡುವು ದಿನಾಂಕದಂದು ಅಥವಾ ಬ್ಯಾಂಕ್/ಆರ್ಥಿಕ ಸಂಸ್ಥೆಗಳಿಂದ ಹಾಗೆ ಪತ್ರ ಸ್ವೀಕರಿಸಿದ ನಂತರ, ಅದನ್ನು ಒಪ್ಪಂದ ಮಾಡಿಕೊಂಡಿರುವ ಷರತ್ತು ಹಾಗೂ ನಿಬಂಧನೆಗಳ ಪ್ರಕಾರ ಪರಿಶೀಲಿಸಿ ಸಾಲ ತೀರಿಸುವಿಕೆಯ ಏರ್ಪಾಡನ್ನು ಮಾಡಲಾಗುವುದು.

ರೆವಿನ್ಯೂ ಬಜೆಟ್ ಹಂಚಿಕೆ:

ಲೆಕ್ಕ ಘಟಕಗಳಿಂದ ಹಿಂದಿನ ವರ್ಷದ ವಾಸ್ತವಿಕ ವೆಚ್ಚದ ವಿವರಗಳನ್ನು ಪಡೆದ ನಂತರ, ಹಣದುಬ್ಬರವನ್ನು ಪರಿಗಣಿಸಿ, ಒಟ್ಟು ರೆವಿನ್ಯೂ ಬಜೆಟ್ ಪ್ರಮಾಣವನ್ನು ಕಂಪೆನಿಗೆ ಅನುಮೋದಿಸಿರುವ ಇ.ಆರ್.ಸಿ.ವೆಚ್ಚಕ್ಕೆ ಮಿತಿಗೊಳಿಸಿ ವಾರ್ಷಿಕ ರೆವಿನ್ಯೂ ಬಜೆಟ್ಟನ್ನು ಸಿದ್ಧಪಡಿಸಲಾಗುವುದು. ಮೊದಲ ತ್ರೈಮಾಸಿಕ ಬಜೆಟ್ ಅವಧಿಗೆ ವಾರ್ಷಿಕ ಬಜೆಟ್‌ನ ನಾಲ್ಕನೆಯ ಒಂದು ಭಾಗವನ್ನು ಹಂಚಲಾಗುವುದು. ನಂತರದ ತ್ರೈಮಾಸಿಕದ ಬಜೆಟ್ ಭಾಗವನ್ನು ಬಿಡುಗಡೆ ಮಾಡಲು ಹಿಂದಿನ ತ್ರೈಮಾಸಿಕದ ವಾಸ್ತವಿಕ ವೆಚ್ಚವನ್ನು ಪರಿಶೀಲಿಸಲಾಗುವುದು.

ರೆವಿನ್ಯೂ ಬಜೆಟ್ ವಿವರ ಹೀಗಿದೆ( ರೂ.ಕೋಟಿಗಳಲ್ಲಿ)

ಲೆಕ್ಕ ಶೀರ್ಷಿಕೆ

ವಿವರ

2011-12

2012-13

2013-14

ಕವಿನಿ ಅನುಮೋದಿತ

ವಾಸ್ತವಿಕ ವೆಚ್ಚ

ಕವಿನಿ ಅನುಮೋದಿತ

ವಾಸ್ತವಿಕ ವೆಚ್ಚ

ಕವಿನಿ ಅನುಮೋದಿತ

70 ವಿದ್ಯುತ್ ಖರೀದಿ 8965.24 8559.75 11292.61 10787.25 10914.80
74 ದುರಸ್ತಿ ಹಾಗೂ ನಿರ್ವಹಣೆ 725.6 32.94 871.34 44.27 977.38
75 ಸಿಬ್ಬಂದಿ ವೆಚ್ಚ 649.89 739.12
76 ಆಡಳಿತ ಹಾಗೂ ಸಾಮಾನ್ಯ ವೆಚ್ಚ 77.04 112.69
ಉಪ ಮೊತ್ತ 725.6 759.87 871.34 896.08 977.38
78 ಬಡ್ಡಿ ಮತ್ತು ಆರ್ಥಿಕ ಶುಲ್ಕ 442.19 242.22 515.53 407.46 526.31
ಒಟ್ಟು 10133.03 9561.84 12630.94 12090.79 12418.49

ಸ್ಥಳೀಯ ಬ್ಯಾಂಕುಗಳಿಂದ ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲ್ಪಟ್ಟ ಮೊಬಲಗಿನ ತಾಳೆ ಹೊಂದಾಣಿಕೆ:

ಹಣ ಹಿಂಪಡೆಯುವ ಸೌಲಭ್ಯವಿಲ್ಲದ(ನಾನ್ ಆಪರೇಟೀವ್)ಚಾಲ್ತಿ ಖಾತೆಯಿಂದ ಬ್ಯಾಂಕುಗಳು ಕೇಂದ್ರ ಕಚೇರಿಯ ಚಾಲ್ತಿ ಖಾತೆಗೆ ವರ್ಗಾವಣೆ ಮಾಡಿದ ಮೊಬಲಗನ್ನು ಕೇಂದ್ರ ಕಚೇರಿಯ ಲೆಕ್ಕಕ್ಕೆ ವರ್ಗಾವಣೆ ಮಾಡಿದ ಮೊಬಲಗು ಎಂದು ಲೆಕ್ಕೀಕರಿಸಲಾಗುತ್ತದೆ. ಎಲ್ಲಾ ಲೆಕ್ಕ ಘಟಕಗಳು, ತಮ್ಮ ಹಣ ಹಿಂಪಡೆಯುವ ಸೌಲಭ್ಯವಿಲ್ಲದ(ನಾನ್ ಆಪರೇಟೀವ್)ಚಾಲ್ತಿ ಖಾತೆಯ ಮಾಸಿಕ ಬ್ಯಾಂಕ್ ಲೆಕ್ಕ ಸಮನ್ವಯ ತಃಖ್ತೆ ವರದಿಯನ್ನು ಕೇಂದ್ರ ಕಚೇರಿಗೆ ಸಲ್ಲಿಸತಕ್ಕದ್ದು. ಹೀಗೆ ಮಾಸಿಕ ಬ್ಯಾಂಕ್ ಲೆಕ್ಕ ಸಮನ್ವಯ ತಃಖ್ತೆ ವರದಿಯನ್ನು ಪಡೆದ ನಂತರ, ಆ ವರದಿಯಲ್ಲಿನ ವಿವರಗಳನ್ನು ಬ್ಯಾಂಕುಗಳು ಕೇಂದ್ರ ಕಚೇರಿಯ ಚಾಲ್ತಿ ಖಾತೆಗೆ ವರ್ಗಾವಣೆ ಮಾಡಿದ ಮೊಬಲಗಿಗೆ ಹೋಲಿಸಿ ಪರಿಶೀಲಿಸಲಾಗುತ್ತದೆ. ಆದಾಗ್ಯೂ, ಮಾರ್ಚ್ ಅಂತಿಮ ಲೆಕ್ಕಗಳನ್ನು ಇತ್ಯರ್ಥಗೊಳಿಸುವ ಸಮಯದಲ್ಲಿ, ಕೇಂದ್ರ ಕಚೇರಿಯ ಚಾಲ್ತಿ ಖಾತೆಗೆ ವರ್ಗಾವಣೆ ಮಾಡಿದ ಮೊಬಲಗನ್ನು ಆಯಾ ಲೆಕ್ಕ ಘಟಕ ಕಚೇರಿಗಳು ಲೆಕ್ಕಕ್ಕೆ ತೆಗೆದುಕೊಂಡ ಮೊಬಲಗಿನೊಂದಿಗೆ ಹೋಲಿಸಿ ದೃಢೀಕರಣ ನೀಡಲಾಗುತ್ತದೆ.

ವಿವಿಧ ಬ್ಯಾಂಕುಗಳಲ್ಲಿ ಬೆವಿಕಂಪನಿಯು ಹೊಂದಿರುವ ಹಣ ಹಿಂಪಡೆಯುವ ಸೌಲಭ್ಯವಿಲ್ಲದ(ನಾನ್ ಆಪರೇಟೀವ್)ಚಾಲ್ತಿ ಖಾತೆ ವಿವರ:

ಬ್ಯಾಂಕಿನ ಹೆಸರು ಹೊಂದಿರುವ ಖಾತೆಗಳು
ಎಚ್.ಡಿ.ಎಫ್.ಸಿ.ಬ್ಯಾಂಕ್

85

ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್

93

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ

6

ಕೆನರಾ ಬ್ಯಾಂಕ್

45

ಸಿಂಡಿಕೇಟ್ ಬ್ಯಾಂಕ್

11

ಬ್ಯಾಂಕ್ ಆಫ್ ಬರೋಡಾ

3

ಐ.ಸಿ.ಐ.ಸಿ.ಐ. ಬ್ಯಾಂಕ್

3

ಆಕ್ಸಿಸ್ ಬ್ಯಾಂಕ್

1

ಐ.ಡಿ.ಬಿ.ಐ. ಬ್ಯಾಂಕ್

1

ಒಟ್ಟು

248