ಗಂಗಾ ಕಲ್ಯಾಣದ ಬಗ್ಗೆ | BESCOM

BESCOM : Bangalore Electricity Supply Company Limited

ಎಸ್ಎಂಎಸ್ : 58888
ಸಹಾಯವಾಣಿ : 1912
9449844640

ಗಂಗಾ ಕಲ್ಯಾಣದ ಬಗ್ಗೆ

slide3

 • ಈ ಯೋಜನೆಯು ಘನ ಸರ್ಕಾರದ ಹಾಗೂ ಬೆವಿಕಂನ ಸಾಮಾಜಿಕ ಜವಾಬ್ದಾರಿಯಾಗಿದ್ದು, ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತ ರೈತರ ನೀರಾವರಿ ಪಂಪುಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.
 • ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ನಾಲ್ಕು ಅಭಿವೃದ್ದಿ ನಿಗಮಗಳು ಒಳಗೊಂಡಿರುತ್ತದೆ.
  • ಡಾ|| ಬಿ.ಆರ್.ಅಂಬೇಡ್ಕರ್ ಅಭಿವೃದ್ದಿ ನಿಗಮ (ಪರಿಶಿಷ್ಟ ಜಾತಿ).
  • ಕರ್ನಾಟಕ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮ (ಪರಿಶಿಷ್ಟ ಪಂಗಡ)
  • ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ
  • ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ

 • ಈ ಯೋಜನೆಯಲ್ಲಿ ಫಲಾನುಭವಿಗಳನ್ನು ಸಂಬಂಧಪಟ್ಟ ಅಭಿವೃದ್ಧಿ ನಿಗಮಗಳು ಗುರುತಿಸಿ, ಜಿಲ್ಲಾವ್ಯವಸ್ಥಾಪಕರು ಅಗತ್ಯ ದಾಖಲಾತಿಗಳೊಂದಿಗೆ ತಮ್ಮ ಸಹಿ ಮತ್ತು ಮೊಹರುನೊಂದಿಗೆ ಬೆವಿಕಂನಲ್ಲಿ ಅರ್ಜಿಗಳನ್ನು ನೋಂದಣಿ ಮಾಡುತ್ತಾರೆ.
 • ಅರ್ಜಿಯನ್ನು ನೋಂದಣಿ ಮಾಡಿದ ಮೇಲೆ, ಬೆವಿಕಂ ಅಧಿಕಾರಿಗಳು, ಸ್ಥಳ ಪರಿಶೀಲನೆ ಮಾಡಿ, ಅಂದಾಜುಪಟ್ಟಿಯನ್ನು ತಯಾರಿಸಿ, ವಿದ್ಯುತ್ ಸಂಪರ್ಕ ನೀಡಲು ಠೇವಣಿ ವಿವರಗಳನ್ನೊಳಗೊಂಡ ಮಂಜುರಾತಿ ಪತ್ರವನ್ನು ಫಲಾನುಭವಿ ಹಾಗೂ ಸಂಬಂಧಪಟ್ಟ ಅಭಿವೃದ್ಧಿ ನಿಗಮಗಳಿಗೆ ಸಲ್ಲಿಸುತ್ತಾರೆ.
 • ಎಲ್ಲಾ ಅಭಿವೃದ್ಧಿ ನಿಗಮದವರಿಗೂ ವೈಯುಕ್ತಿಕ ಫಲಾನುಭವಿಗಳಿಗೆ ಪಾವತಿ ಮಾಡಬೇಕಾಗಿರುವ ಠೇವಣಿ ವಿವರಗಳನ್ನೊಳಗೊಂಡ ವಿದ್ಯುತ್ ಮಂಜೂರಾತಿ ಪತ್ರವನ್ನು ನೀಡಲಾಗುವುದು
 • ಠೇವಣಿಗಳ ವಿವರ:

  • Initial Security Deposit : 1 HP = Rs 610/-
  • Meter Security Deposit = Rs 1200/-
  • Meter Box = Rs 330/-
 • ಡಿ.ದೇವರಾಜು ಅರಸು ಹಾಗೂ ಕರ್ನಾಟಕ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದವರಿಗೆ ಸಾಮೂಹಿಕ ಫಲಾನುಭವಿಗಳಿಗೆ 25,000/- ಠೇವಣಿ ಮೊತ್ತದ ವಿವರಗಳನ್ನೊಳಗೊಂಡ ವಿದ್ಯುತ್ ಮಂಜೂರಾತಿ ಪತ್ರವನ್ನು ನೀಡಲಾಗುವುದು
 • ಠೇವಣಿಗಳನ್ನು ಪಾವತಿಸಿದ ನಂತರ ಕಾರ್ಯದೇಶ ಸಂಖ್ಯೆಯನ್ನು ನೀಡಿ, ಲೈಸೆನ್ಸ್ ಹೊಂದಿರುವ ವಿದ್ಯುತ್ ಗುತ್ತಿಗೆದಾರರ ಮೂಲಕ ಅಂದಾಜುಪಟ್ಟಿಯಲ್ಲಿರುವಂತೆ ಕಾಮಗಾರಿಯನ್ನು ಪೂರ್ಣಗೊಳಿಸಿ ವಿತರಣಾ ಕಂಪನಿಗಳ ನಿಯಮಾನುಸಾರ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು.
 • ಬೆವಿಕಂನಲ್ಲಿ ವಿದ್ಯುದ್ದೀಕರಣಗೊಳಿಸಲು ಯಾವುದೇ ಅಂದಾಜುಪಟ್ಟಿಯ ಮಿತಿಯಿರುವುದಿಲ್ಲ.
 • ಬೆವಿಕಂನಲ್ಲಿ ಪಾರ್ಷಿಯಲ್ ಟ್ರಂಕಿ/ ಟೋಟಲ್ ಟ್ರಂಕಿ/ಗುತ್ತಿಗೆ ಆಧಾರದಲ್ಲಿ ಕಾಮಗಾರಿಗಳನ್ನು ಕೈಗೊಂಡು, ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತಿದೆ.
 • ಗಂಗಾಕಲ್ಯಾಣ ಯೋಜನೆಯಡಿ ಅರ್ಜಿ ಪ್ರಕ್ರಿ0iÉು ಸರಳೀಕರಣಗೊಳಿಸಲು ದಿನಾಂಕ 12.06.2012ರಂದು ಸುತ್ತೋಲೆಯನ್ನು ಹೊರಡಿಸಿದ್ದು, ಸದರಿ ಸುತ್ತೋಲೆಯಲ್ಲಿ ಎಲ್ಲಾ ದಾಖಲೆ/ದೃಢೀಕರಣಗಳನ್ನು ಅರ್ಜಿಯೊಂದಿಗೆ ನೋಂದಣಿಯ ಸಮಯದಲ್ಲೇ ಮತ್ತು ಠೇವಣೆ ಮೊತ್ತವನ್ನು ಅರ್ಜಿ ನೋಂದಣಿ ಸಮಯದಲ್ಲೇ ಪಾವತಿಸಲು ಸೂಚಿಸಲಾಗಿದೆ, ಅಂತಹ ಸಂದರ್ಭದಲ್ಲಿ ಅರ್ಜಿಗಳು ರದ್ದಾಗುವ ಸಾಧ್ಯತೆ ಇರುವುದಿಲ್ಲ ಮತ್ತು ಅಭಿವೃದ್ಧಿ ನಿಗಮದವರ ಕಡೆ ಅರ್ಜಿಗಳು ಬಾಕಿ ಇರುವುದಿಲ್ಲ.
 • ಮುಂದುವರೆದು, ಬೆವಿಕಂ ಮತ್ತು ಎಲ್ಲಾ ವಿತರಣಾ ಕಂಪನಿಗಳಲ್ಲಿ ಗಂಗಾಕಲ್ಯಾಣ ಅರ್ಜಿಗಳನ್ನು ಆನ್ ಲೈನ್‍ನಲ್ಲಿ ನೋಂದಣಿ ಮಾಡಲು ಬೆವಿಕಂ ಸಾಮಾನ್ಯ ಆಧಾರಿತ ಅಂತರ್ಜಾ¯ ತಂತ್ರಾಂಶವನ್ನು ರೂಪಿಸಿದ್ದು, ಸದರಿ ತಂತ್ರಾಂಶದಲ್ಲಿ ಅಭಿವೃದ್ಧಿ ನಿಗಮದವರು ಅರ್ಜಿಗಳನ್ನು ನೋಂದಣಿ ಮಾಡಿ ಕಡತ ಸಲ್ಲಿಸಿದ ನಂತರ ಎಸ್ಕಾಂಗಳ ಪ್ರಕ್ರಿ0iÉು ನಡೆಯಲಿದೆ.
 • ಪ್ರತಿ ಮಾಹೆ ವೃತ್ತ ಕಚೇರಿಗಳಲ್ಲಿ, , ಬೆವಿಕಂ ಅಧಿಕಾರಿಗಳು ಹಾಗೂ ಸಂಬಂಧಿತ ಅಭಿವೃದ್ಧಿ ನಿಗಮಗಳ ಜಿಲ್ಲಾ ವ್ಯವಸ್ಥಾಪಕರೊಂದಿಗೆ ಸಮನ್ವಯ ಜಂಟಿ ಸಭೆ ನಡೆಸಿ ಅಂಕಿ ಅಂಶಗಳನ್ನು ತಾಳೆ ಮಾಡಿ ಪ್ರತಿ ಮಾಹೆಯು ಇಂಧನ ಇಲಾಖೆ, ಕವಿಪ್ರನಿನಿ ಹಾಗೂ ಘನ ಸರ್ಕಾರ ನಿಯೋಜಿಸುವ ಎಲ್ಲಾ ಸಭೆಗೆ ಕಳುಹಿಸಲಾಗುತ್ತಿದೆ. ಜಂಟಿ ಸಹಿಯ ಅಂಕಿ ಅಂಶಗಳನ್ನಾಧಾರಿಸಿ ಪ್ರತೆ ಮಾಹೆ ನಿಗಮ ಕಚೇರಿಯಲ್ಲಿ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ.

 • ಕಳೆದ ಮೂರು ವರ್ಷಗಳಲ್ಲಿ ಗಂಗಾಕಲ್ಯಾಣ ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸಿದ ವಿವರಗಳು ಕೆಳಕಂಡಂತಿದೆ.
ಯೋಜನೆ 2011-12 2012-13 2013-14
ಗಂಗಾಕಲ್ಯಾಣ ಯೋಜನೆ 2867 5694 4511

ಮುಖ್ಯ ಪ್ರಧಾನ ವ್ಯವಸ್ಥಾಪಕರು (ಕಾರ್ಯಾಚರಣೆ)
ಬೆವಿಕಂ