ವಿದ್ಯುತ್ ಸಾಗಣೆ ಮತ್ತು ಬ್ಯಾಂಕಿಂಗ್/ಮುಕ್ತ ವ್ಯವಹರಣೆ | BESCOM

BESCOM : Bangalore Electricity Supply Company Limited

ಎಸ್ಎಂಎಸ್ : 58888
ಸಹಾಯವಾಣಿ : 1912
9449844640

ವಿದ್ಯುತ್ ಸಾಗಣೆ ಮತ್ತು ಬ್ಯಾಂಕಿಂಗ್/ಮುಕ್ತ ವ್ಯವಹರಣೆ

ವಿದ್ಯುತ್ ಸಾಗಣೆ ಮತ್ತು ಬ್ಯಾಂಕಿಂಗ್/ಮುಕ್ತ ವ್ಯವಹರಣೆ :

ಕವಿನಿ ಆಯೋಗವು ಅನುಮೋದಿಸಿರುವ ನಿಗದಿತ ವಿದ್ಯುತ್ ಸಾಗಣೆ ಮತ್ತು ಬ್ಯಾಂಕಿಂಗ್ ಒಪ್ಪಂದದ ಪ್ರಕಾರ, ಬೆವಿಕಂಪೆನಿಯ ವ್ಯಾಪ್ತಿಯಲ್ಲಿ ಎಚ್.ಟಿ.ಸ್ಥಾಪನಗಳಿಗೆ ಕವಿನಿ ಆಯೋಗವು ಅನುಮೋದಿಸಿರುವ ನಮೂನೆಯಲ್ಲಿ(REC route (Anx-I) ಮತ್ತು Non REC route) (Anx-II) ವಿದ್ಯುತ್ ಸಾಗಣೆ ಮಾಡಲು ಇಚ್ಛಿಸುವ ಉದ್ದೇಶಿತ ಸ್ವಾಯತ್ತ ವಿದ್ಯುತ್ ಉತ್ಪಾದನಾ ಸಂಸ್ಥೆಗಳೊಂದಿಗೆ ವಿದ್ಯುತ್ ಸಾಗಣೆ ಹಾಗೂ ಬ್ಯಾಂಕಿಂಗ್ ಒಪ್ಪಂದಗಳ ಒಡಂಬಡಿಕೆಯನ್ನು ಮಾಡಿಕೊಳ್ಳಲಾಗುತ್ತಿದೆ. ಪವನ ಮತ್ತು ಕಿರು ಜಲ ವಿದ್ಯುತ್ ಯೋಜನೆಗಳ ವಿದ್ಯುತ್ ಸಾಗಣೆ ಶುಲ್ಕ ೫% ಮತ್ತು ಬ್ಯಾಂಕಿಂಗ್ ಶುಲ್ಕ 2%. ನಿರ್ಬಂಧಿತ ಬಳಕೆಯನ್ನು ಹೊರತುಪಡಿಸಿ, ವಿದ್ಯುತ್ ಸಾಗಣೆ ಹಾಗೂ ಬ್ಯಾಂಕಿಂಗ್ ಅಧಿಕ ಕರ ಶುಲ್ಕವನ್ನು ಕವಿನಿ ಆಯೋಗದ 2014-15 ರ ವಿದ್ಯುತ್ ದರ ಆದೇಶದ ಪ್ರಕಾರ ದಿನಾಂಕ12-05-2014.ರಿಂದ ವಸೂಲು ಮಾಡಲಾಗುತ್ತಿದೆ. ಆಗಸ್ಟ್ 2014ರಂದು ಇದ್ದಂತೆ, ವಿದ್ಯುತ್ ಸಾಗಣೆ ಹಾಗೂ ಬ್ಯಾಂಕಿಂಗ್‌ನ 82 ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದ್ದು, ಇದರ ಪೈಕಿ 30 ಒಪ್ಪಂದಗಳು ನಿರ್ಬಂಧಿತ ಬಳಕೆಯದ್ದಾಗಿದ್ದು 38 ಒಪ್ಪಂದಗಳು ನಿರ್ಬಂಧಿತವಲ್ಲದ ಉತ್ಪಾದನೆಯದ್ದಾಗಿವೆ.

ಮುಕ್ತ ವ್ಯವಹರಣೆಗಳು:

ಕವಿನಿ ಆಯೋಗದ ಮುಕ್ತ ವ್ಯವಹರಣೆ ನಿಯಮಾವಳಿ 2004 ಮತ್ತು ಅದರ ಮುಂದಿನ ತಿದ್ದುಪಡಿಗಳ ಪ್ರಕಾರ, 1ಮೆಗಾ ವಾಟ್‌ಗಿಂತ ಹೆಚ್ಚಿನ ಒಪ್ಪಂದಿತ ಬೇಡಿಕೆಯನ್ನು ಹೊಂದಿರುವ ಬೆವಿಕಂಪೆನಿಯ ಎಚ್.ಟಿ. ಗ್ರಾಹಕರಿಗೆ ಮುಕ್ತ ವ್ಯವಹರಣೆಯ ಅವಕಾಶವನ್ನು ಅನುಮತಿಸಲಾಗಿದೆ. ಈವರೆಗೆ, 36 ಎಚ್.ಟಿ. ಗ್ರಾಹಕರಿಗೆ ಮುಕ್ತ ವ್ಯವಹರಣೆಯ ಮೂಲಕ ವಿದ್ಯುತ್ ಖರೀದಿಸಲು ಅನುಮತಿಸಲಾಗಿದ್ದು, 19 ಗ್ರಾಹಕರು ವಿದ್ಯುತ್ ಬದಲಾವಣೆ ವ್ಯವಸ್ಥೆಯ ಮೂಲಕ ಅಲ್ಪಾವಧಿ ವ್ಯವಹರಣೆಯ ವಿದ್ಯುತ್ ಖರೀದಿಯ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

ಬೆವಿಕಂಪೆನಿಗೆ ವಿದ್ಯುತ್ ಒಳಹರಿವಿನ ಪ್ರಮಾಣ:

ಎಸ್.ಎಲ್.ಡಿ.ಸಿ. ಮತ್ತು ಟಿ.ಬಿ.ಸಿ.ಯು ಒದಗಿಸುವ ದತ್ತಾಂಶ ಮಾಹಿತಿಗಳನ್ನು ಆಧರಿಸಿ, ಮಾಸಿಕವಾಗಿ ಬೆವಿಕಂಪೆನಿಯು ಸ್ವೀಕರಿಸುವ ವಿದ್ಯುತ್ ಒಳಹರಿವಿನ ವಿದ್ಯುತ್ ಪ್ರಮಾಣವನ್ನು ಲೆಕ್ಕೀಕರಿಸಿ ಲೆಕ್ಕ ಸಮನ್ವಯಗೊಳಿಸಲಾಗುತ್ತಿದೆ.