ಬೆಂಗಳೂರು ವಿದ್ಯುತ್ ಸರಬರಾಜು ಕಂಪೆನಿ ನಿಯಮಿತ(ಬೆವಿಕಂ)ವು ಕರ್ನಾಟಕ ರಾಜ್ಯದ ೮ ಜಿಲ್ಲೆಗಳಲ್ಲಿ ಸುಮಾರು 41,092 ಚದರ ಕಿಲೋ ಮೀಟರ್ ವ್ಯಾಪ್ತಿಯ 207 ಲಕ್ಷ ಜನಸಂಖ್ಯೆಯ ಪ್ರದೇಶಕ್ಕೆ ವಿದ್ಯುತ್ ವಿತರಣೆಯನ್ನು ಮಾಡುವ ಜವಾಬ್ದಾರಿಯನ್ನು ಹೊಂದಿದೆ.
ಬೆಂಗಳೂರು ಮಹಾನಗರ ವಲಯ, ಬೆಂಗಳೂರು ಗ್ರಾಮೀಣ ಪ್ರದೇಶ ವಲಯ ಮತ್ತು ಚಿತ್ರದುರ್ಗ ವಲಯ – ಕಂಪನಿ ಮೂರು ಕಾರ್ಯ ವಲಯಗಳನ್ನು ಹೊಂದಿದೆ.